ಮಂಗಳವಾರ, ಜೂನ್ 01, 2010

ಹೆಲ್ಮೆಟ್ಟು




ಪಲ್ಸರಿನಲ್ಲೆ ಪಾರ್ಕಿಗೋಗಲು

ಪದ್ದು ಹಿಡಿದಳು ಪಟ್ಟು.....


ಪಕ್ಕದಲ್ಲಿ ಇದ್ದದ್ದು


ತರ್ಕಾರಿ ಮಾರ್ಕೆಟ್ಟು....


ಎದುರಲ್ಲಿ ಬಂದವಳಿಗೂ


ನನ್ನಾಕೆಗೂ ಸ್ನೇಹದ ನಂಟು....


ಅವಳ್ಕಣ್ಣ ತಪ್ಸಿದ್ದು


ನನ್ ಕೂಲಿಂಗ್ಲಾಸು ಹೆಲ್ಮೆಟ್ಟು.....





ಸೋಮವಾರ, ಮೇ 10, 2010

ನನ್ ಪ್ರೀತಿ





ನನ್ ಪ್ರೀತಿ

ಹೂವಿನ ತರಹ
ಬಾಡುವುದಿಲ್ಲ....


ಮಂಜಿನ ತರಹ
ಕರಗುವುದಿಲ್ಲ.....


ಗಾಜಿನ ತರಹ 
ಒಡೆಯೊವುದಿಲ್ಲ.....


ನೀ ನನ್ನ ಪ್ರೀತಿಸದಿದ್ದರೆ
ಬೇರೆಯವರಿಗೆ ರವಾನೆಯಾಗುತ್ತಷ್ಟೇ......




ಮಂಗಳವಾರ, ಮಾರ್ಚ್ 23, 2010

ಮಂಗಳವಾರ, ಮಾರ್ಚ್ 09, 2010

ಮುನಿಸು



ಬಿಟ್ಟುಬಿಡು ನಲ್ಲೆ 
ಮನದೊಳಗಿನ ಮುನಿಸು....


ಅವಳು ಬಂದು
ಹೋದದ್ದೆಲ್ಲಾ ಬರೀ ಕನಸು....


ಇದಕೇಕೆ ಹಾಳು ಮಾಡುವೆ 
ನಿನ್ನ ಮೊಗದ ಸೊಗಸು .....



ಮಂಗಳವಾರ, ಫೆಬ್ರವರಿ 23, 2010

ಕವನ-ಹರ್ಷ



ಕವನ ಬರೆಯಲೆಂದು
ಹೋದೆ ಕಡಲತೀರಕಂದು...


ಹೆಗಲಿಗೊಂದು ಬ್ಯಾಗು
ಒಳಗೆ ಕಾಫಿ ಮಗ್ಗು...


ಬರೆದು ಬರೆದು
ಹಾಳೆಯ ಹರಿದು....


ಸುತ್ತಲು ಮೂಡಿತು ರಾಶಿ
ಯಾವುದೂ ತರಲಿಲ್ಲ ಖುಷಿ....


ಕಾಫಿಯ ಕುಡಿದು
ಹಕ್ಕಿಗಳ ಬಣ್ಣ ಸವಿದು....


ಮರಳಿ ಬಂದೆನು ಮನೆಗೆ
ಕವನ ಹೊಳೆಯಲಿಲ್ಲ ಮನಸಿಗೆ....



ಕೊನೆಗೆ ಮನೆಯಲಿ ಬರೆದೆ ನಿಮಿಷದಲಿ
ಮನವು ತುಂಬಿತು ಹರ್ಷದಲಿ....












ಬುಧವಾರ, ಫೆಬ್ರವರಿ 03, 2010

ದಿನಾ(ಬಾ)ರು







ಕುವೈತಿನಲ್ಲಿ ಕಣ್ಣಿಗೆ 


ಕಾಣಸಿಗದು ಬಾರು.....



ಅದಕ್ಕೆ ಜೇಬಲ್ಲಿ 


ಉಳಿದಿರುವುದು ದಿನಾರು.....


ಇದ್ರಿಂದ  ಪತ್ನಿಯರು 


ಫಜೀತಿಗಳಿಂದಿರುವುದು ಪಾರು......








.

ಶುಕ್ರವಾರ, ಜನವರಿ 15, 2010

ಬ್ಲಾಗ್ ಲೋಕದ ಮಾಂತ್ರಿಕ





ನೋಡಲಿಕ್ಕಷ್ಟೇ ರೌಡಿ ಲುಕ್ಕು....


ಕಣ್ಣು ನೆನಪಿಸುತ್ತೆ ಬೆಕ್ಕು....


ಖಂಡಿತ ಅವರಿಗಿಲ್ಲ ಸೊಕ್ಕು.....


ಒಳ್ಳೆ ಮಾತುಗಳ ಝಲಕ್ಕು...


ಈಗಷ್ಟೇ ಬರೆದವರೆ ಬುಕ್ಕು....


ಅವರಾಕೆ ಒಳ್ಳೆ ಕುಕ್ಕು.....


ಕುಲಪುತ್ರನದು ಫೋಟೋ ಕ್ಲಿಕ್ಕು....


ನೋಡೊದು ನಮ್ಮೆಲ್ಲರ ಲಕ್ಕು...


ಬ್ಲಾಗಲ್ಲಿ ನಗಿಸೋದು ಇವರ ಟ್ರಿಕ್ಕು....


ಅದನ್ನು ಓದಿ ನಾವೆಲ್ಲಾ ನಕ್ಕು....


ಇನ್ನೊಂದ್ ಬ್ಲಾಗಲ್ಲಿ ಹಾರಿಸ್ತಾರೆ ಚುಟುಕು....


ಎಲ್ಲರಿಗೂ ತರಿಸುತ್ತೆ ಸಂತಸದ ಕಿಕ್ಕು....


ಹೀಗೆಲ್ಲಾ ಬರೆಯೋಕೆ ನಮಗಿದೆಯಾ ಹಕ್ಕು.....




ಸ್ನೇಹಿತರೆ ಈ ಮೋಡಿಗಾರ ಯಾರೆಂದು ತಿಳಿತ್ತಾ....?


ಜನವರಿ ೧೭ ರಂದು ಅವರ ಹುಟ್ಟುಹಬ್ಬಕ್ಕಾಗಿ ಈ ಕವನ ಅರ್ಪಣೆ......


ಹುಟ್ಟು ಹಬ್ಬದ ಶುಭಾಶಯಗಳು....











ಬುಧವಾರ, ಜನವರಿ 06, 2010

ಭಾನುವಾರ, ಡಿಸೆಂಬರ್ 27, 2009

ಮಂಗಳವಾರ, ಡಿಸೆಂಬರ್ 15, 2009

ಮಂಗಳವಾರ, ನವೆಂಬರ್ 24, 2009

ನೆನೆಸು




ನೀ ಹೇಳಿದೆ

ಮತ್ತೆಂದೂ

ಅವಳನ್ನು

ನೆನೆಸಬೇಡ ಎಂದು....


ಆ ತುಂತುರು

ಹನಿ ಬಿದ್ದಾಗ

ತೋಳಿನಲ್ಲಿ ಬಂಧಿಸಿ

ಅವಳನ್ನು ನೆನೆಸಲಿಲ್ಲ ಅಂದು.....






ಭಾನುವಾರ, ನವೆಂಬರ್ 15, 2009

ಯೌವನ




ಜಾರಿ ಹೋಗುತ್ತಿರುವುದು ಯೌವನ

ಕುಪ್ಪಳಿಸು ಎನ್ನುತ್ತಲಿರುವುದು ಮನ....


ಮಾಯವಾಗುತ್ತಿರುವುದು ಮೋಹ

ಉಳಿಯದಿರದಿನ್ನು ಉತ್ಸಾಹ....


ಇಲ್ಲಿತನಕ ಮನವಾಗಿತ್ತು ಜಿಂಕೆ

ಮುಂದೆನಾಗುವುದೊ ಎಂಬ ಶಂಕೆ....


ನಲಿಯುತ್ತಿತ್ತು ಮನ ಬಂದಾಗ ಹುಟ್ಟುಹಬ್ಬ

ಅರಿಯದಾಗಿತ್ತು ಕಣ್ಣಿನ ಮಬ್ಬ...


ಚಿಂತಿಸಿದರೆ ಇನ್ನು ಹೆಚ್ಚು

ಹಿಡಿಯುವುದು ಮನಕೆ ಹುಚ್ಚು....


ಯೌವನದ ಉಲ್ಲಾಸ ದಿನಗಳು

ಮೆಲುಕಲು ಆಗುವವು ಸವಿನೆನಪುಗಳು.....




ಭಾನುವಾರ, ನವೆಂಬರ್ 01, 2009

ಪ್ರೀತಿಸು




ಕನ್ನಡಕ್ಕೆ ಸಿಕ್ಕಿತೆಂದು
ಶಾಸ್ತ್ರೀಯ ಸ್ಥಾನಮಾನ....

ಹಾಗೆಂದು ಶಾಸ್ತ್ರಕ್ಕೆಂದು
ಬಳಸಿ ಮಾಡದಿರು ಅವಮಾನ....



ಎಲ್ಲಾ ಭಾಷೆಯನ್ನು ಪ್ರೀತಿಸು....

ಕನ್ನಡವನ್ನು ಪ್ರೀತಿಸಿ ಗೌರವಿಸು.....


ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು......






ಶುಕ್ರವಾರ, ಅಕ್ಟೋಬರ್ 23, 2009

ಹೆಂಡತಿ




ಹೆಂಡತಿಯೊಬ್ಬಳು

ಮನೆಯಲಿದ್ದರೆ

ಅವನು ಒಬ್ಬ ಸಿಪಾಯಿ....

ಹೆಂಡತಿಯರಿಬ್ಬರು

ಮನೆಯಲಿದ್ದರೆ

ಅವನು ಒಬ್ಬ ಬಡಪಾಯಿ.....




ಭಾನುವಾರ, ಅಕ್ಟೋಬರ್ 11, 2009

ಲೂಸು-ಟೈಟು




ಮುನಿಸು ಏಕೆ

ನಲ್ಲೆ ಇಂದು....

ನೀ ಹೇಳುತ್ತಿದೆ

ಯಾವಾಗಲೂ ನಾ ಲೂಸೆಂದು....

ಅದಕ್ಕೆ ಬಂದೆ

ಟೈಟಾಗಿ ನಿನ್ನ ಮುಂದು.....








ಶುಕ್ರವಾರ, ಅಕ್ಟೋಬರ್ 02, 2009

ಶನಿವಾರ, ಸೆಪ್ಟೆಂಬರ್ 12, 2009

ಪ್ರೇಮಪತ್ರ



ನಿನಗಾಗಿ ಬರೆದ
ಪ್ರೇಮ ಪತ್ರ ...

ಅಕಸ್ಮಾತ್ ಸಿಕ್ಕಿತು
ನನ್ನವಳ ಹತ್ರ ...

ತಪ್ಪಿಸಿಕೊಳ್ಳಲು ಇದ್ದ
ಒಂದೆ ಸೂತ್ರ ....

ಅದರಲ್ಲಿ ಬರೆದಿರಲಿಲ್ಲ
ನಿನ್ನ ಮುದ್ದಿನ ಹೆಸ್ರ ....




ಭಾನುವಾರ, ಸೆಪ್ಟೆಂಬರ್ 06, 2009

ಪ್ರೀತಿ ಪ್ರೇಮ



ಅವಳು ಕೇಳಿದಳು
"ನಲ್ಲ, ತೋರಿಸುವೆಯಾ
ನನಗೆ ಪ್ರೀತಿ ಪ್ರೇಮ..."

ಅವನು ಹೇಳಿದ
"ಪ್ರೀತಿ ಬರ್ತಾಳೊ ಇಲ್ವೊ,
ಪ್ರೇಮಳಂತೂ ಕರೆ ತರುವೆ..."






ಮಂಗಳವಾರ, ಸೆಪ್ಟೆಂಬರ್ 01, 2009

ಸ್ಪೂರ್ತಿ


ಅವಳಿಗೆ ಕೇಳಿದ

"ಕವನ ಬರೆಯಲು
ಜೀವನ ಪೂರ್ತಿ...
ಬೇಕು ಸ್ಪೂರ್ತಿ...."

"ಆ ಹೆಸರಿನವಳು
ನನಗ್ಯಾರು ಗೊತ್ತಿಲ್ಲ "
ಅಂದಳು ಹತ್ತು ಸಾರ್ತಿ....


ಭಾನುವಾರ, ಆಗಸ್ಟ್ 23, 2009

ಮನದ ತವಕ



ನಿನಗಾಗಿ ನನ್ನವರ ತೊರೆದೆ ಮನೆ ಮನವ
ಯಾರಿಲ್ಲ ತೋಡಿಕೊಳ್ಳಲೀಗಾ ಮನದ ನೋವ....

ನಿನ್ನ ವರಿಸಿ ಕಳೆಯಿತೊಂದು ವರ್ಷ
ದಿನ ದಿನ ಮರೆಯಾಗುತಿದೆ ಹರ್ಷ....

ಕರ್ತವ್ಯದ ಕರೆಗೆ ಒಗೊಟ್ಟು
ಹೊರಟೆ ನೀ ನನ್ನ ಬದಿಗಿಟ್ಟು....

ನಿನ್ನ ಜೊತೆ ಕಳೆದ ದಿನಗಳು ಕಾಡುತ್ತೆ ಹಗಲಿರುಳು
ನಿನ್ನ ಕರುಳ ಕುಡಿಗೀಗಾ ಏಳು ತಿಂಗಳು.....

ಮೂಡಿದೆ ನನಗೀಗಾ ಹಲವಾರು ಬಯಕೆ
ನಿನ್ನ ಬಂದೊಮ್ಮೆ ಸೇರುವಾಸೆ ಮನಕೆ.....
ಕಣ್ಣೀರ ಒರೆಸಲು ನನಗಿಲ್ಲ ಅಕ್ಕ ತಂಗಿ
ನೀ ಒಂಟಿ ಎಂದು ಹೇಳುತಿದೆ ಮನ ಕೂಗಿ.....

ನೀ ಹೋದ್ಮೇಲೆ ತಿರುಗಿದೆ ಕ್ಯಾಲೆಂಡರಿನ ಆರು ಪುಟಗಳು
ಕಾತುರದಿ ನಿನ್ನ ನೋಡಲು ಏಣಿಸುತ ದಿನಗಳು....
ಬಂದು ಹೋಗುವೆಯಾ ನಲ್ಲ ಮ್ಮೆ
ನಾನಿನ್ನ ಕರುಳಕುಡಿಗೆ ಜನ್ಮ ನೀಡುವ ಮುನ್ನ.......





ಭಾನುವಾರ, ಆಗಸ್ಟ್ 16, 2009

ಮಂಗಳವಾರ, ಆಗಸ್ಟ್ 11, 2009

ಕುಡಿತದ ಮಸ್ತಿ


ಬಾಟಲ್ ಕುಲ್ಕಿ...
ಕುಡಿದ ವಿಸ್ಕಿ...

ನಿಶೆ ಉಕ್ಕಿ...
ಮನೆಯೆಡೆ ಹೊಕ್ಕಿ...

ತಟ್ಟಿದ ಬಾಗಿಲ ಕುಕ್ಕಿ ಕುಕ್ಕಿ...
ಬಾಗಿಲ ತೆರೆದಳು ಅವನಾಕಿ...

ಕುಡಿತದಿ ಸೊಕ್ಕಿ...
ತಿಂದದ್ದನ್ನೆಲ್ಲ ಕಕ್ಕಿ ಕಕ್ಕಿ...

ಇದ ಕಂಡವಳು ಇಟ್ಟಳು ಯಕ್ಕಮಿಕ್ಕಿ...
ಆಮೇಲೆ ಸಿಕ್ಕ ಹೆಸರು ಪೊರ್ಕಿ...

ಇಂತದೆಲ್ಲಾ ನಮಗ್ಯಾಕಿ...
ಚಟ ಇದ್ರೆ ಬಿಸಾಕಿ......




ಸೋಮವಾರ, ಆಗಸ್ಟ್ 10, 2009

ತಾಯ್ನಾಡಿಂದ ಮರಳ್ಗಾಡಿಗೆ...


ಕಳೆಯಿತು ಮರಳ್ಗಾಡಲ್ಲಿ ಬೇಸಿಗೆ...
ಆಲಿಸಿ ತನ್ನ ಪ್ರಿಯಕರನ ಕರೆಗೆ...

ಸಜ್ಜಾಗಿ ಹೊರಟು ಅವನೆಡೆಗೆ...
ಹಕ್ಕಿಯು ಮರಳಿತು ಗೂಡಿಗೆ...

ಸೇರಿತು ತನ್ನಿನಿಯನ ತೆಕ್ಕೆಗೆ...
ಅರಿಯದು ಮತ್ತೆಂದೊ ತಾಯ್ನಾಡಿಗೆ...

ಜ್ಯೋತಿ ಬೆಳಗಿತು ದೇವರ ಗುಡಿಗೆ...
ಅರಸಿರಿ ಶುಭವ ಆ ಜೋಡಿಗೆ...





ಶನಿವಾರ, ಆಗಸ್ಟ್ 08, 2009

ನಮ್ಮಿಬ್ಬರ ಮುತ್ತು


ನಿನಗೆ ಕೊಡಲೆಂದೆ

ಭೊಗಸೆ ತುಂಬಿ
ತರುತ್ತಿದ್ದ ಮುತ್ತುಗಳು

ಭೊರ್ಗರೆವ ಮಳೆಯಲ್ಲಿ
ನಾ ಜಾರಿ ಬಿದ್ದಾಗ

ಭೂಮಿಯಲ್ಲಿ ಹರಡಿ
ಕೆಸರಾದವು ಮಣ್ಣಲ್ಲಿ.....

ನೀ ಕೊಟ್ಟ ಮುತ್ತುಗಳು
ಹಸಿರಾದವು ಕಣ್ಣಲ್ಲಿ.....






ನೀ ಕನಸಲ್ಲಿ...


ನಿನ್ನ ಭಾವಚಿತ್ರ
ದಿಂಬಿನಡಿ
ಇಟ್ಟು ಮಲಗಿದ್ದಾಗ
ಬರಲಿಲ್ಲ ನೀ ಕನಸಲ್ಲಿ....

ನಿನ್ನ ಕಿರುನಗೆ ಚಿತ್ರ
ಹೃದಯದಡಿ
ಇಟ್ಟು ಮಲಗಿದ್ದಾಗ
ತುಂಬಿಕೊಂಡೆ ನೀ ಕನಸಲ್ಲಿ....


ಸೋಮವಾರ, ಆಗಸ್ಟ್ 03, 2009

ಧಕ್ಕೆ



"ನಿನ್ನೆದುರು ಗೆಲ್ಲಲ್ಲು
ಚೆಲುವೆಯರಿಗೊದಗಿದೆ ಧಕ್ಕೆ......

ಕ್ರೀಂ ಪೌಡರ್ ಗಳು
ಕಾರಣವಲ್ಲ ನಿನ್ನ ಅಂದಕ್ಕೆ....."

ಸಿಕ್ಕಿತೊಂದು ಚುಂಬನ
ಹೀಗೆ ಹೇಳಿದ್ದಕ್ಕೆ......