ಮಂಗಳವಾರ, ಫೆಬ್ರವರಿ 23, 2010

ಕವನ-ಹರ್ಷಕವನ ಬರೆಯಲೆಂದು
ಹೋದೆ ಕಡಲತೀರಕಂದು...


ಹೆಗಲಿಗೊಂದು ಬ್ಯಾಗು
ಒಳಗೆ ಕಾಫಿ ಮಗ್ಗು...


ಬರೆದು ಬರೆದು
ಹಾಳೆಯ ಹರಿದು....


ಸುತ್ತಲು ಮೂಡಿತು ರಾಶಿ
ಯಾವುದೂ ತರಲಿಲ್ಲ ಖುಷಿ....


ಕಾಫಿಯ ಕುಡಿದು
ಹಕ್ಕಿಗಳ ಬಣ್ಣ ಸವಿದು....


ಮರಳಿ ಬಂದೆನು ಮನೆಗೆ
ಕವನ ಹೊಳೆಯಲಿಲ್ಲ ಮನಸಿಗೆ....ಕೊನೆಗೆ ಮನೆಯಲಿ ಬರೆದೆ ನಿಮಿಷದಲಿ
ಮನವು ತುಂಬಿತು ಹರ್ಷದಲಿ....
ಬುಧವಾರ, ಫೆಬ್ರವರಿ 03, 2010

ದಿನಾ(ಬಾ)ರುಕುವೈತಿನಲ್ಲಿ ಕಣ್ಣಿಗೆ 


ಕಾಣಸಿಗದು ಬಾರು.....ಅದಕ್ಕೆ ಜೇಬಲ್ಲಿ 


ಉಳಿದಿರುವುದು ದಿನಾರು.....


ಇದ್ರಿಂದ  ಪತ್ನಿಯರು 


ಫಜೀತಿಗಳಿಂದಿರುವುದು ಪಾರು......
.