ಶನಿವಾರ, ಆಗಸ್ಟ್ 08, 2009

ನಮ್ಮಿಬ್ಬರ ಮುತ್ತು


ನಿನಗೆ ಕೊಡಲೆಂದೆ

ಭೊಗಸೆ ತುಂಬಿ
ತರುತ್ತಿದ್ದ ಮುತ್ತುಗಳು

ಭೊರ್ಗರೆವ ಮಳೆಯಲ್ಲಿ
ನಾ ಜಾರಿ ಬಿದ್ದಾಗ

ಭೂಮಿಯಲ್ಲಿ ಹರಡಿ
ಕೆಸರಾದವು ಮಣ್ಣಲ್ಲಿ.....

ನೀ ಕೊಟ್ಟ ಮುತ್ತುಗಳು
ಹಸಿರಾದವು ಕಣ್ಣಲ್ಲಿ.....






7 ಕಾಮೆಂಟ್‌ಗಳು:

  1. ಮಹೇಶ್....

    ನನ್ನ ಕಂಪ್ಯೂಟರ್‍ಗೆ ವೈರಸ್ ಬಂದಿತ್ತು...
    ಕೆಲಸದ ಒತ್ತಡವೂ ಇತ್ತು...
    ಹಾಗಾಗಿ ಬರಲಾಗಲಿಲ್ಲ....
    ಬೇಸರಿಸ ಬೇಡಿ....

    ನೀವು ಕವನ ಬರಿತೀರಾ ಅಂತ ಗೊತ್ತೇ ಇರಲಿಲ್ಲ...
    "ನಿನ್ನಿಂದ ಪಡದೆದುಕೊಂಡ ಮುತ್ತುಗಳು ಹಸಿರಾದವು ಕಣ್ಣಲ್ಲಿ"...!!
    ವಾಹ್...!

    ಸುಂದರವಾದ ಕಲ್ಪನೆ....!
    ಇನ್ನಷ್ಟು ಕವನ ಬರೆಯಿರಿ...
    ಸ್ಪೂರ್ತಿ ಹೇಗಿದ್ದರೂ ಈಗ ಬಳಿಯಲ್ಲೇ ಇದೆ.....

    ಪ್ರತ್ಯುತ್ತರಅಳಿಸಿ
  2. ಮಹೇಶ್ ಸರ್,

    ಕೇರಳದಿಂದ ಬಂದು ನಿದಾನವಾಗಿ ಒಂದೊಂದೆ ಬ್ಲಾಗ್ ಓದುತ್ತಿದ್ದೇನೆ. ನಿಮ್ಮ ಕವನ ತುಂಬಾ ಚೆನ್ನಾಗಿದೆ.ಕೊನೆಯ ಸಾಲುಗಳು ತುಂಬಾ ಚೆನ್ನಾಗಿದೆ.
    ಹೀಗೆ ಬರೆಯುತ್ತಿರಿ...

    ಪ್ರತ್ಯುತ್ತರಅಳಿಸಿ
  3. ಪ್ರಕಾಶಣ್ಣ,
    ಧನ್ಯವಾದಗಳು...
    ತಡವಾಗಿ ಬಂದ್ರಿ ಅಂತ ನನಗೇನೂ ಬೇಸರವಿಲ್ಲ...
    ಸುಮ್ನ್ ಹಾಗೆ ಗೀಚೋದು ಯಾವಗಾದ್ರು ....


    ಶಿವಣ್ಣ,
    ಹೇಗಿತ್ತು ಕೇರಳ ಪ್ರವಾಸ...ಮಲ್ಲಿಕಾರ್ಜುನರು ಜೊತೆ ಇದ್ದರಾ....
    ಮತ್ತಷ್ಟು ಕೇರಳ ಸೊಬಗನ್ನು ತಂದ್ದಿದೀರಾ ಅನ್ಸುತ್ತೆ.....
    ಕವನ ಮೆಚ್ಚಿದಕ್ಕೆ ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  4. ತುಂಬಾ ಚಂದದ ಕಲ್ಪನೆಯ ಕವನ ..ತುಂಬಾ ಇಸ್ಟವಾಯ್ತು

    ಪ್ರತ್ಯುತ್ತರಅಳಿಸಿ
  5. ರಂಜಿತ,
    ನಿಮ್ಮ ಬ್ಲಾಗ್ ನೋಡಿ ಕಲ್ಪನೆಯ ಕವನ ಬರೆಯೋಣ ಅನಿಸಿತು...
    ಆಗ ಬರೆದದ್ದು...
    ಮೆಚ್ಚುಗೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  6. ಮಹೇಶ್ ನಿಧಾನವಾಗಿ ಮತ್ತು ಗಂಭೀರವಾಗಿ ಕವಿ-ಕವಿತೆಗೆ ವಾಲುತ್ತಿರುವ ನಿಮ್ಮ ಪರಿ ಪರಿ-ಪರಿ ಬಣ್ಣನೆಗೆ ಗರಿಕೊಡುತ್ತಿವೆ. ಚನ್ನಾಗಿದೆ ಮುತ್ತಿನ ಸುತ್ತಲ ಕಥನ, ಮುಂದುವರೆಸಿ...

    ಪ್ರತ್ಯುತ್ತರಅಳಿಸಿ