ಮಂಗಳವಾರ, ಫೆಬ್ರವರಿ 23, 2010

ಕವನ-ಹರ್ಷ



ಕವನ ಬರೆಯಲೆಂದು
ಹೋದೆ ಕಡಲತೀರಕಂದು...


ಹೆಗಲಿಗೊಂದು ಬ್ಯಾಗು
ಒಳಗೆ ಕಾಫಿ ಮಗ್ಗು...


ಬರೆದು ಬರೆದು
ಹಾಳೆಯ ಹರಿದು....


ಸುತ್ತಲು ಮೂಡಿತು ರಾಶಿ
ಯಾವುದೂ ತರಲಿಲ್ಲ ಖುಷಿ....


ಕಾಫಿಯ ಕುಡಿದು
ಹಕ್ಕಿಗಳ ಬಣ್ಣ ಸವಿದು....


ಮರಳಿ ಬಂದೆನು ಮನೆಗೆ
ಕವನ ಹೊಳೆಯಲಿಲ್ಲ ಮನಸಿಗೆ....



ಕೊನೆಗೆ ಮನೆಯಲಿ ಬರೆದೆ ನಿಮಿಷದಲಿ
ಮನವು ತುಂಬಿತು ಹರ್ಷದಲಿ....












27 ಕಾಮೆಂಟ್‌ಗಳು:

  1. ಸ್ಫೂರ್ತಿ, ಕಾಫಿ ಮುಗ್-ನಲ್ಲಿ ಅಥವಾ ಸಮುದ್ರ ದ೦ಡೆ ತೀರದಲ್ಲಿಲ್ಲಾ ಅದು ಮನೆಯಲ್ಲಿ ಅಥವಾ ಎಲ್ಲಾದರೂ ತತಕ್ಷಣ ಹೊಮ್ಮಬಹುದು ಎ೦ದು ಚೆನ್ನಾಗಿ ಹೇಳಿದ್ದಿರಾ....
    ಮನೆಯಸ್ಫೂತಿ ಇನ್ನು ಇದೆಯಲ್ಲಾ ಸ೦ತೋಷ.
    ಚೆ೦ದದ ಹನಿ.

    ಪ್ರತ್ಯುತ್ತರಅಳಿಸಿ
  2. ಹೌದು ಸಾರ್.. ನೀವು ಹೇಳಿದ್ದು ನಿಜ... "ಎಲ್ಲೊ ಹುಡುಕಿದೆ ಇಲ್ಲದ ದೇವರ" ಅಂತ ಕೇಳಿಲ್ವೇ... ಆಲ್ವಾ?? ಚೆನ್ನಾಗಿದೆ...

    ಪ್ರತ್ಯುತ್ತರಅಳಿಸಿ
  3. "ಏನೇನು ಕಂಡ ಮೇಲೂ ನಮ್ಮೂರೇ ನಮಗೆ ಮೇಲು "...ಓಳ್ಳೆ ಕವನ

    ಪ್ರತ್ಯುತ್ತರಅಳಿಸಿ
  4. ಕವನ ಬರೆಯಲು ಬೇಕಿಲ್ಲ ಶ್ರಮ,
    ಸಾಕು ಇದ್ದರೆ ಬರೆಯುವ ಮನ,
    ಎನ್ನುತ್ತಾ ಬ೦ದಿಹುದಿಲ್ಲಿ ಒಳ್ಳೆಯ ಕವನ,
    ಸ೦ತಸಗೊಳಿಸಿದೆ ಓದುಗರ ಮನ.

    ಸೊಗಸಾದ ಸಾಲುಗಳು.

    ಪ್ರತ್ಯುತ್ತರಅಳಿಸಿ
  5. ತುಂಬಾ ಚೆನ್ನಾಗಿದೆ ನಿಮ್ಮ ಕವನದ ಶ್ರಮ,
    ಬರೆಯುವ ಕ್ರಮ

    ಪ್ರತ್ಯುತ್ತರಅಳಿಸಿ
  6. ಮಹೇಶ್ ,
    ಕವನ ಚೆನ್ನಾಗಿತ್ತು.
    ಕವನ ಬರೆಯಲು ಇಷ್ಟು ಸುಲಭದ ದಾರಿ ಇರುವಾಗ ,ವಿಭಿನ್ನವಾದ ಮಾರ್ಗ ಹುಡುಕಿದಿರಾ!!!?

    ಪ್ರತ್ಯುತ್ತರಅಳಿಸಿ
  7. ಮಹೇಶ್ ಸರ್ ,
    ಹಹ್ಹ ಹ್ಹ ಹ್ಹ ಚನ್ನಾಗಿದೆ
    ಸ್ವರ್ಗದಂತ ಮನೆಯಲಿ ಸ್ಪೂರ್ತಿಯಾಗಿ ಮಡದಿ ಇರಲು
    ನದಿಯ ದಡದಿ ಕಾಫೀ ಕುಡಿಯಲು ಹೊದಿದ್ದಿರಿ ಅನ್ನಿ ! :P

    ಪ್ರತ್ಯುತ್ತರಅಳಿಸಿ
  8. ಹ್ಹ ಹ್ಹ ..ತುಂಬಾ ಚೆನಾಗಿದೆ..ನಾವೇ ಹೀಗೆ ಅಲ್ವೇ!!!!!!!!

    ಪ್ರತ್ಯುತ್ತರಅಳಿಸಿ
  9. ಸೀತಾರಾಮ್ ಸರ್,
    ಮನೆಯಲ್ಲಿ ಸ್ಫೂರ್ತಿ ಇದೆ ....ಸ್ಫೂರ್ತಿ ಅಂತ ಯಾರು ಇಲ್ಲ....
    ಧನ್ಯವಾದಗಳು....


    ರವಿಕಾಂತ್,
    ಎಲ್ಲ ಕಡೆ ಹುಡುಕಿದೆ ಎಲ್ಲೂ ಸಿಗಲಿಲ್ಲ...
    ಧನ್ಯವಾದಗಳು....


    ಸುಬ್ರಮಣ್ಯ,
    ನಮ್ಮೂರು ನಮಗೆ ಯಾವಗಲೂ ಮೇಲು
    ಧನ್ಯವಾದಗಳು....


    ಚುಕ್ಕಿಚಿತ್ತಾರ,
    ಧನ್ಯವಾದಗಳು....


    ಮನಮುಕ್ತಾ,
    ಶ್ರಮವಿಲ್ಲದೆ ಕವನ ಸ೦ತಸಗೊಳಿಸಿದ್ದರೆ ನಾನು ಧನ್ಯ....


    ಡಾ.ಗುರು,
    ಧನ್ಯವಾದಗಳು....


    ಶಶಿ,
    sಸುಲಭದ ದಾರಿ ಗೊತ್ತಾಗೋದು ಹಲವು ಮಾರ್ಗ ನೋಡಿದ ಮೇಲೆ...
    ಧನ್ಯವಾದಗಳು....


    ರಂಜಿತಾ,
    ತಪ್ಪಿನ ಅರಿವಾಯಿತು....
    ಧನ್ಯವಾದಗಳು....


    ವನಿತಾ,
    ಧನ್ಯವಾದಗಳು....


    ಮಾನಸ,
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  10. Mahesh avare...kadala alegalanthaha bhaavanegalu maneyalli nimage holeda vishaya chennagi moodi bandide... heege barithiri...

    ಪ್ರತ್ಯುತ್ತರಅಳಿಸಿ
  11. ಹಾ ಹಾ,, ತುಂಬ ಚೆನ್ನಾಗಿ ಇದೆ... ನಿಮ್ಮ ಕವನ... ಬರದೆ ಇದ್ದರು ,, ಬರೆದಿರುವ ಪರಿ... ವೆರಿ ನೈಸ್...

    ಪ್ರತ್ಯುತ್ತರಅಳಿಸಿ
  12. ಮಹೇಶ್ ಸರ್, ಕಡಲ ತೀರದಲ್ಲಿ ಕವನ ಹೊಳೆಯದೆ ಮನೆಯಲ್ಲಿ ಹೊಳೆಯಿತೆಂದರೆ, ಅಲ್ಲೇನೋ ಸ್ಫೂರ್ತಿ ಇದೆ ಅಲ್ವಾ?????
    ತುಂಬಾ ಚನ್ನಾಗಿದೆ.

    ಪ್ರತ್ಯುತ್ತರಅಳಿಸಿ
  13. ಮಹೇಶ್ ಸರ್, ಆ ಮರಳಗಾಡಿನಲ್ಲಿ ಅದೆಲ್ಲಿ ಕಡಲು ಹುಡುಕಿ ಹೊರಟಿರಿ.. ಅಲ್ಲ ಮನೆಯಲ್ಲೇ ಓಯಾಸಿಸ್ ಸಿಕ್ಕಿತು ಬಿಡಿ :)
    ದಿನಾ(ಬಾ)ರು ಸಕತ್ತು... ದಿನಾ ಬಾರು ಅಂತ ಮಾಡಿದ್ರೆ ದರ್ಬಾರು... ಮನೆ ಮಠ ಎಲ್ಲ ಮಾರು... ಅಂತ ಚೆನ್ನಾಗೇ ಹೇಳಿದ್ದೀರಿ.

    ಪ್ರತ್ಯುತ್ತರಅಳಿಸಿ
  14. ಮಹೇಶ್ ಸರ್,
    ತುಂಬಾ ಶ್ರಮ ಪಟ್ಟು, ಕೊನೆಗೆ ತುಂಬಾ ಸರಳವಾಗಿ ಹೊಳೆದು... ಬರೆದ ಕವನ ತುಂಬಾ ಚೆನ್ನಾಗಿದೆ.....

    ಪ್ರತ್ಯುತ್ತರಅಳಿಸಿ
  15. ಮಹೇಶ್ ಸರ್,

    ಕವನ ಬರೆಯಲು ಸ್ಫೂರ್ತಿ ಎಲ್ಲೆಲ್ಲಿಂದಲೂ ಬೇಕಾದರೂ ಬರಬಹುದು ಅನ್ನುವುದಕ್ಕೆ ಇದು ಒಂದು ಉದಾಹರಣೆ ಅಲ್ವೇ..

    ಪ್ರತ್ಯುತ್ತರಅಳಿಸಿ
  16. ರಮೇಶ್,
    ಗುರು,
    ಪ್ರವೀಣ್,
    ಪ್ರಭು,
    ದಿನಕರ್,

    ನಿಮ್ಮಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  17. 'ಸವಿಗನಸು ' ಅವ್ರೆ..,

    ಚೆನ್ನಾಗಿದೆ... ಇನ್ಮುಂದೆ ಮನೆಯಲ್ಲೇ ಬರೆಯಿರಿ..

    Blog is Updated: http:/manasinamane.blogspot.com

    ಪ್ರತ್ಯುತ್ತರಅಳಿಸಿ
  18. ಶಿವು ಸರ್,
    ರಾಹುದೆಸೆ,
    ಮಾಲತಿ,

    ನಿಮ್ಮಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  19. ಮಹೇಶ್....

    ಮನೆಯಲ್ಲಿದ್ದ..
    ಮಾನಿನಿ..
    ಅವಳ..
    ಮಮತೆ..
    ಮರೆಸಿ ಬೇಸರ..
    ಬರೆಸಿತು...

    ಮನದ..
    ಮಾತು.. ಮುತ್ತುಗಳನು...!

    ಅಲ್ಲವಾ...??

    ಪ್ರತ್ಯುತ್ತರಅಳಿಸಿ
  20. ಡಿಫರೆ೦ಟ್ ಆಗಿದೆ ಕವನ ಸವಿಗನಸು ಅವರೇ... ಚೆನ್ನಾಗಿದೆ ಕೂಡ... :)

    ಪ್ರತ್ಯುತ್ತರಅಳಿಸಿ
  21. ಪ್ರಕಾಶಣ್ಣ,
    ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ..
    ಧನ್ಯವಾದಗಳು..

    ಸುಧೇಶ್,
    ನಿಮಗೂ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  22. ಅ೦ತು-ಇ೦ತು ,
    ಒಳ್ಳೆಯ ಕವಿತೆ ಬ೦ತು.
    Nice one......good one...

    ಪ್ರತ್ಯುತ್ತರಅಳಿಸಿ