ಸೋಮವಾರ, ಡಿಸೆಂಬರ್ 13, 2010

ಏಕೆ....??



ವಾಕಿಂಗ್ ಮಾಡಲು
ಮುದ್ದಾದ ನಾಯಿ
ಬೇಕೆಂದಳು ಅವನಾಕೆ....

ಅವನಂದನು
ನಾ ನಿನ್ನೊಂದಿಗೆ
ಇರುವಾಗ ಅದಿನ್ಯಾಕೆ....


ಬುಧವಾರ, ನವೆಂಬರ್ 17, 2010

ಪ್ರತಿಭಾ



ನೀ ಹೇಳಿದೆ 

ಬುದ್ಧಿ ಇರುವವರು  

ಬುದ್ಧಿವಂತರು ಎಂದು...



  ಈಗೇಳು, ನೀ


     ನನ್ನೊಂದಿಗಿದ್ರೆ
     
  ನಾ ಪ್ರತಿಭಾವಂತನಲ್ಲವೇ...?



ಸೋಮವಾರ, ಅಕ್ಟೋಬರ್ 25, 2010

ನೆನೆದು



ನೀರಿನಲ್ಲಿ 
ನೆನೆದು ನೆನೆದು
ಕಲ್ಲು ಕರಗಲೇ ಇಲ್ಲಾ ....


ಮನದಲ್ಲೇ 
ನಿನ್ನ ನೆನೆದು
ಕರಗಿ ಹೋದೆನಲ್ಲಾ ....



ಬುಧವಾರ, ಅಕ್ಟೋಬರ್ 06, 2010

ಪ್ರಿಯ



ನೀ ನನ್ನ 
ಕರೆದಾಗಲೆಲ್ಲಾ
"ಪ್ರಿಯ... ಪ್ರಿಯ"...


ನೆನಪಾಗ್ತಾಳೆ
 ನನ್ನ ಕಾಲೇಜಿನ 
  ಆ  "ಪ್ರಿಯ"...




ಸೋಮವಾರ, ಸೆಪ್ಟೆಂಬರ್ 20, 2010

ತರಲೆ



ನಲ್ಲ, ನೀ ಹೇಳುತ್ತಿದ್ದೆ
ಯಾವಾಗಲೂ 
ಮುತ್ತು ತರಲೆ ಎಂದು....


ನೀ ಕೊಟ್ಟ ಮೇಲೆ
ತಿಳಿಯಿತು 
ನೀ ಬಲು ತರಲೆ ಎಂದು.....







ಮಂಗಳವಾರ, ಆಗಸ್ಟ್ 10, 2010

ಬೆಳಗು



ಮನೆಯನ್ನು ಬೆಳೆಗಲು
ಮಡದಿಯನ್ನು ತಂದನು....


ಅವಳ ಜೊತೆಗೀಗಾ
ಅವನು ಬೆಳಗುತ್ತಿರುವನು
ಪಾತ್ರೆಯನ್ನು.....





ಮಂಗಳವಾರ, ಜುಲೈ 06, 2010

ರಂಭೆ



ಬೀಳುವಂತಾದರೆ
ರಂಭೆಯನ್ನು
ಹಿಡಿದುಕೊ ಅಂದಳು....


ಬೀಳುವ ನೆಪವನೊಡ್ಡಿ
ಆ ರಂಭೆಯನ್ನು 
ಹಿಡಿದುಕೊಂಡೇ ಬಿಟ್ಟನು....





ಬುಧವಾರ, ಜೂನ್ 16, 2010

ಅಂದ - ಚೆಂದ



ಪದ ಪುಂಜಗಳು
ಸಾಲಲಿಲ್ಲ ಬಣ್ಣಿಸಲು
ಅವಳ ಅಂದ ಚೆಂದ....


ಪಕ್ಕದಲ್ಲಿ ನಿಲ್ಲಲು
ಬಿಡಲಿಲ್ಲ ಅವಳ
ಬಾಯಿಯ ದುರ್ಗಂಧ....





ಮಂಗಳವಾರ, ಜೂನ್ 01, 2010

ಹೆಲ್ಮೆಟ್ಟು




ಪಲ್ಸರಿನಲ್ಲೆ ಪಾರ್ಕಿಗೋಗಲು

ಪದ್ದು ಹಿಡಿದಳು ಪಟ್ಟು.....


ಪಕ್ಕದಲ್ಲಿ ಇದ್ದದ್ದು


ತರ್ಕಾರಿ ಮಾರ್ಕೆಟ್ಟು....


ಎದುರಲ್ಲಿ ಬಂದವಳಿಗೂ


ನನ್ನಾಕೆಗೂ ಸ್ನೇಹದ ನಂಟು....


ಅವಳ್ಕಣ್ಣ ತಪ್ಸಿದ್ದು


ನನ್ ಕೂಲಿಂಗ್ಲಾಸು ಹೆಲ್ಮೆಟ್ಟು.....





ಸೋಮವಾರ, ಮೇ 10, 2010

ನನ್ ಪ್ರೀತಿ





ನನ್ ಪ್ರೀತಿ

ಹೂವಿನ ತರಹ
ಬಾಡುವುದಿಲ್ಲ....


ಮಂಜಿನ ತರಹ
ಕರಗುವುದಿಲ್ಲ.....


ಗಾಜಿನ ತರಹ 
ಒಡೆಯೊವುದಿಲ್ಲ.....


ನೀ ನನ್ನ ಪ್ರೀತಿಸದಿದ್ದರೆ
ಬೇರೆಯವರಿಗೆ ರವಾನೆಯಾಗುತ್ತಷ್ಟೇ......




ಮಂಗಳವಾರ, ಮಾರ್ಚ್ 23, 2010

ಮಂಗಳವಾರ, ಮಾರ್ಚ್ 09, 2010

ಮುನಿಸು



ಬಿಟ್ಟುಬಿಡು ನಲ್ಲೆ 
ಮನದೊಳಗಿನ ಮುನಿಸು....


ಅವಳು ಬಂದು
ಹೋದದ್ದೆಲ್ಲಾ ಬರೀ ಕನಸು....


ಇದಕೇಕೆ ಹಾಳು ಮಾಡುವೆ 
ನಿನ್ನ ಮೊಗದ ಸೊಗಸು .....



ಮಂಗಳವಾರ, ಫೆಬ್ರವರಿ 23, 2010

ಕವನ-ಹರ್ಷ



ಕವನ ಬರೆಯಲೆಂದು
ಹೋದೆ ಕಡಲತೀರಕಂದು...


ಹೆಗಲಿಗೊಂದು ಬ್ಯಾಗು
ಒಳಗೆ ಕಾಫಿ ಮಗ್ಗು...


ಬರೆದು ಬರೆದು
ಹಾಳೆಯ ಹರಿದು....


ಸುತ್ತಲು ಮೂಡಿತು ರಾಶಿ
ಯಾವುದೂ ತರಲಿಲ್ಲ ಖುಷಿ....


ಕಾಫಿಯ ಕುಡಿದು
ಹಕ್ಕಿಗಳ ಬಣ್ಣ ಸವಿದು....


ಮರಳಿ ಬಂದೆನು ಮನೆಗೆ
ಕವನ ಹೊಳೆಯಲಿಲ್ಲ ಮನಸಿಗೆ....



ಕೊನೆಗೆ ಮನೆಯಲಿ ಬರೆದೆ ನಿಮಿಷದಲಿ
ಮನವು ತುಂಬಿತು ಹರ್ಷದಲಿ....












ಬುಧವಾರ, ಫೆಬ್ರವರಿ 03, 2010

ದಿನಾ(ಬಾ)ರು







ಕುವೈತಿನಲ್ಲಿ ಕಣ್ಣಿಗೆ 


ಕಾಣಸಿಗದು ಬಾರು.....



ಅದಕ್ಕೆ ಜೇಬಲ್ಲಿ 


ಉಳಿದಿರುವುದು ದಿನಾರು.....


ಇದ್ರಿಂದ  ಪತ್ನಿಯರು 


ಫಜೀತಿಗಳಿಂದಿರುವುದು ಪಾರು......








.

ಶುಕ್ರವಾರ, ಜನವರಿ 15, 2010

ಬ್ಲಾಗ್ ಲೋಕದ ಮಾಂತ್ರಿಕ





ನೋಡಲಿಕ್ಕಷ್ಟೇ ರೌಡಿ ಲುಕ್ಕು....


ಕಣ್ಣು ನೆನಪಿಸುತ್ತೆ ಬೆಕ್ಕು....


ಖಂಡಿತ ಅವರಿಗಿಲ್ಲ ಸೊಕ್ಕು.....


ಒಳ್ಳೆ ಮಾತುಗಳ ಝಲಕ್ಕು...


ಈಗಷ್ಟೇ ಬರೆದವರೆ ಬುಕ್ಕು....


ಅವರಾಕೆ ಒಳ್ಳೆ ಕುಕ್ಕು.....


ಕುಲಪುತ್ರನದು ಫೋಟೋ ಕ್ಲಿಕ್ಕು....


ನೋಡೊದು ನಮ್ಮೆಲ್ಲರ ಲಕ್ಕು...


ಬ್ಲಾಗಲ್ಲಿ ನಗಿಸೋದು ಇವರ ಟ್ರಿಕ್ಕು....


ಅದನ್ನು ಓದಿ ನಾವೆಲ್ಲಾ ನಕ್ಕು....


ಇನ್ನೊಂದ್ ಬ್ಲಾಗಲ್ಲಿ ಹಾರಿಸ್ತಾರೆ ಚುಟುಕು....


ಎಲ್ಲರಿಗೂ ತರಿಸುತ್ತೆ ಸಂತಸದ ಕಿಕ್ಕು....


ಹೀಗೆಲ್ಲಾ ಬರೆಯೋಕೆ ನಮಗಿದೆಯಾ ಹಕ್ಕು.....




ಸ್ನೇಹಿತರೆ ಈ ಮೋಡಿಗಾರ ಯಾರೆಂದು ತಿಳಿತ್ತಾ....?


ಜನವರಿ ೧೭ ರಂದು ಅವರ ಹುಟ್ಟುಹಬ್ಬಕ್ಕಾಗಿ ಈ ಕವನ ಅರ್ಪಣೆ......


ಹುಟ್ಟು ಹಬ್ಬದ ಶುಭಾಶಯಗಳು....











ಬುಧವಾರ, ಜನವರಿ 06, 2010