ಭಾನುವಾರ, ಆಗಸ್ಟ್ 23, 2009

ಮನದ ತವಕ



ನಿನಗಾಗಿ ನನ್ನವರ ತೊರೆದೆ ಮನೆ ಮನವ
ಯಾರಿಲ್ಲ ತೋಡಿಕೊಳ್ಳಲೀಗಾ ಮನದ ನೋವ....

ನಿನ್ನ ವರಿಸಿ ಕಳೆಯಿತೊಂದು ವರ್ಷ
ದಿನ ದಿನ ಮರೆಯಾಗುತಿದೆ ಹರ್ಷ....

ಕರ್ತವ್ಯದ ಕರೆಗೆ ಒಗೊಟ್ಟು
ಹೊರಟೆ ನೀ ನನ್ನ ಬದಿಗಿಟ್ಟು....

ನಿನ್ನ ಜೊತೆ ಕಳೆದ ದಿನಗಳು ಕಾಡುತ್ತೆ ಹಗಲಿರುಳು
ನಿನ್ನ ಕರುಳ ಕುಡಿಗೀಗಾ ಏಳು ತಿಂಗಳು.....

ಮೂಡಿದೆ ನನಗೀಗಾ ಹಲವಾರು ಬಯಕೆ
ನಿನ್ನ ಬಂದೊಮ್ಮೆ ಸೇರುವಾಸೆ ಮನಕೆ.....
ಕಣ್ಣೀರ ಒರೆಸಲು ನನಗಿಲ್ಲ ಅಕ್ಕ ತಂಗಿ
ನೀ ಒಂಟಿ ಎಂದು ಹೇಳುತಿದೆ ಮನ ಕೂಗಿ.....

ನೀ ಹೋದ್ಮೇಲೆ ತಿರುಗಿದೆ ಕ್ಯಾಲೆಂಡರಿನ ಆರು ಪುಟಗಳು
ಕಾತುರದಿ ನಿನ್ನ ನೋಡಲು ಏಣಿಸುತ ದಿನಗಳು....
ಬಂದು ಹೋಗುವೆಯಾ ನಲ್ಲ ಮ್ಮೆ
ನಾನಿನ್ನ ಕರುಳಕುಡಿಗೆ ಜನ್ಮ ನೀಡುವ ಮುನ್ನ.......





12 ಕಾಮೆಂಟ್‌ಗಳು:

  1. ಏನು ಮಯೇಸಣ್ಣ, ಈ ಪಾಟಿ ಇರಹ ಕಾಡೈತೆ ನಿಂಗೆ ಅದೂ ಇಷ್ಟ್ ಲೇಟಾಗಿ..
    ಬೋ ಮಜವಾಗೈತೆ ಬುಡು ನಿನ್ ದಾಟೀ...
    ನೀನ್ ಯೋಳ್ದಂಗೂ ಆಗ್ಬೇಕೂ ಅಂತ ಈ ವರಸೇನಾ..?

    ಪ್ರತ್ಯುತ್ತರಅಳಿಸಿ
  2. ಜಲನಯನ,
    ಏನ್ ಮಾಡದ್ ಕಣಣ್ಣ...ಎಲ್ರೂ ಇವ್ನೇನೂ ಬರೀ ಮುತ್ತು ..ತಬ್ಬಕೋ..ಇಂಥವೆ ಬರೀತಾನೆ ಅನ್ಕಣಬುಟ್ಟವ್ರೆ...ಅದಕ್ಕೆಯಾ ಅದೆಂತದೋ ಇಮೇಜ್ ಅಂತರಲ್ಲಣ್ಣ ಅದು ಬಂದುಬುಟ್ರೆ ಕಸ್ಟಾಕಣ್ಣಣೊ ಅದಕ್ಕೆಯಾ ಈ ದಪ ಬ್ಯಾರೆ ವರಸೇ...

    ಧನ್ಯವಾದ ಕಣ್ಣಣೋ

    ಪ್ರತ್ಯುತ್ತರಅಳಿಸಿ
  3. ಹ ಹ ಹ..... ನಗು ಮೇಲಿನ ಕಮೆ೦ಟುಗಳನ್ನು ಓದಿ.... ನಿಮ್ಮ ಕವನ ಓದಿ ಅಲ್ಲ... :)

    ಏನೇ ಆದರೂ ಕವನದ ಧಾಟಿ ತು೦ಬಾ ಚೆನ್ನಾಗಿದೆ... ವರಸೆ ಕೂಡ.... ಕವನದಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದರೆ ಎಷ್ಟು ಚೆನ್ನಾಗಿರುತ್ತದಲ್ಲ... ನಿಮ್ಮ ಈ ಪ್ರಯೋಗ ಕೂಡ ಯಶಸ್ವಿ ಆಗಿದೆ....

    ಪ್ರತ್ಯುತ್ತರಅಳಿಸಿ
  4. ನನಗೊಂದು ಅನುಮಾನ ನೀವು ಗಂಡ ಹೆಂಡತಿ ಇಬ್ರೂ ಸಂಭಾಷಣೆನೂ ಕವನದ ರೂಪದಲ್ಲೇ ಮಾಡ್ತೀರ ಅಂತ.

    ಪ್ರತ್ಯುತ್ತರಅಳಿಸಿ
  5. ಮಹೇಶ್ ಸರ್,

    ಮೂರ್ತಿ ಸರ್ ಅವರ ಅಭಿಪ್ರಾಯವೇ ನನ್ನದು ಕೂಡ. ಏಕೆಂದರೆ ಸದಾ ಎರಡು ಬ್ಲಾಗಿನಲ್ಲೂ ಕವನಗಳು ಹರಿಯುತ್ತಿರುತ್ತವಲ್ಲ...
    ಹೊಸ ಶೈಲಿಯಲ್ಲಿ ಕವನ ಚೆನ್ನಾಗಿದೆ...

    ಪ್ರತ್ಯುತ್ತರಅಳಿಸಿ
  6. ಸುಧೇಶ್,
    ವರಸೆಗಳು ಇದ್ದರೆ ಚೆಂದ ಅಲ್ವ...
    ಮೆಚ್ಚುಗೆಗೆ ಧನ್ಯವಾದಗಳು



    ನಾಣು,
    ನಾನು ಈಗಷ್ಟೆ ಬರೆಯೋಕೆ ಶುರು ಮಾಡಿದ್ದೀನಿ....ಅದು ಬರೀ ೪ ಸಾಲುಗಳು ಅಷ್ಟೆ...ಜಾಸ್ತಿ ಬರೆಯೋಕೆ ಬರೊಲ್ಲಪ್ಪ...
    ಮೆಚ್ಚುಗೆಗೆ ಧನ್ಯವಾದಗಳು



    ಶಿವು ಸರ್,
    ಧನ್ಯವಾದಗಳು
    ಎರಡು ಬೇರೆ ಬೇರೆ ಧಾಟಿನಲ್ಲಿ ಇಲ್ವಾ.....
    ನೀವು ಫೋಟೊ ಜೊತೆ ಕವನ ಬರೆಯಿರಿ ಮುಂದೆ....

    ಪ್ರತ್ಯುತ್ತರಅಳಿಸಿ
  7. ಸವಿಗನಸು,

    ಕರ್ತವ್ಯದ ಕರೆಗೆ ಓಗೊಟ್ಟು ಹೋದ ಪ್ರಿಯತಮನನ್ನು ನೆನೆದು ಪರಿತಪಿಸುತ್ತಿರುವ ಗರ್ಭಿಣಿ ಪ್ರಿಯತಮೆಯ ಮನದಾಳದ ಮಾತುಗಳನ್ನು ತುಂಬ ಚನ್ನಾಗಿ ಈ ಪುಟ್ಟ ಕವನದಲ್ಲಿ ಹಿಡಿದಿಟ್ಟಿದ್ದೀರ. ಇಷ್ಟವಾಯಿತು. ಅಭಿನಂದನೆಗಳು.

    - ಉಮೇಶ್

    ಪ್ರತ್ಯುತ್ತರಅಳಿಸಿ
  8. ವಿರಹ ನೂರು ತರಹ???/
    ತುಂಬಾ ಚೆನ್ನಾಗಿದೆ ಪದ್ಯ
    :-)
    ಮಾಲತಿ ಎಸ್.

    ಪ್ರತ್ಯುತ್ತರಅಳಿಸಿ
  9. ಉಮೇಶ್,
    ಧನ್ಯವಾದಗಳು
    ಬರುತ್ತಾ ಇರಿ...



    ಮಾಲತಿ,
    ಮೆಚ್ಚುಗೆಗೆ ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  10. ಸರ್,
    ತುಂಬಾ ಚೆನ್ನಾಗಿದೆ ಕವನ. ಹೆಣ್ಣಿಗೆ ಅಂತಹ ಸಮಯದಲ್ಲಿ ಬೇರೆ ಎಲ್ಲಕ್ಕಿಂತ ಗಂಡಿನ ಸಾನಿಧ್ಯ ಎಷ್ಟು ಅಗತ್ಯ ಎನ್ನುವುದನ್ನು ಚೆನ್ನಾಗಿ ಮನದಟ್ಟಾಗುತ್ತೆ.

    ಪ್ರತ್ಯುತ್ತರಅಳಿಸಿ
  11. ಮಹೇಶ್...

    ತುಂಬಾ ಭಾವ ಪೂರ್ಣವಾಗಿ ಬಣ್ಣಿಸಿದ್ದೀರಿ...
    ಹೆಣ್ಣನ ಮನವನ್ನು...

    ಹೃದಯಕ್ಕೆ ತಟ್ಟುವಂತೆ ಇದೆ...

    ಚಂದದ ಕವಿತೆಗೆ ಅಭಿನಂದನೆಗಳು....

    ಪ್ರತ್ಯುತ್ತರಅಳಿಸಿ
  12. ಮಲ್ಲಿಕಾರ್ಜುನ್ ಸರ್,
    ದೂರ ಇರುವ ಪ್ರಿಯತಮನನ್ನು ನೆನೆದು ಪರಿತಪಿಸುವ ಪ್ರಿಯತಮೆಯ ಮನದಾಳದ ಮಾತುಗಳು....
    ಹೆಣ್ಣು ಅದೆ ಅಲ್ಲವಾ ಬಯಸೋದು...
    ಮೆಚ್ಚುಗೆಗೆ ಧನ್ಯವಾದಗಳು


    ಪ್ರಕಾಶಣ್ಣ,
    ಹೆಣ್ಣಿಗೆ ಅಂತಹ ಸಮಯದಲ್ಲಿ ಗಂಡಿನ ಸಾನಿಧ್ಯ ಅಗತ್ಯ ಅಲ್ಲವಾ?..
    ಮೆಚ್ಚುಗೆಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ