ಶನಿವಾರ, ಸೆಪ್ಟೆಂಬರ್ 12, 2009

ಪ್ರೇಮಪತ್ರ



ನಿನಗಾಗಿ ಬರೆದ
ಪ್ರೇಮ ಪತ್ರ ...

ಅಕಸ್ಮಾತ್ ಸಿಕ್ಕಿತು
ನನ್ನವಳ ಹತ್ರ ...

ತಪ್ಪಿಸಿಕೊಳ್ಳಲು ಇದ್ದ
ಒಂದೆ ಸೂತ್ರ ....

ಅದರಲ್ಲಿ ಬರೆದಿರಲಿಲ್ಲ
ನಿನ್ನ ಮುದ್ದಿನ ಹೆಸ್ರ ....




21 ಕಾಮೆಂಟ್‌ಗಳು:

  1. ಅಪ್ಪಿ ತಪ್ಪಿ ಹೆಸರು ಬರೆದಿದ್ದರೆ ಮಾತ್ರ|
    ಹುಡುಕಿ ತೆಗೆಯುತ್ತಿದ್ದರು ಆ ಹುಡುಗಿಯ ಕುಲ ಗೋತ್ರ||

    ಅಡಿಗೆಮನೆಯಲ್ಲಿ ಬೀಳುತ್ತಿದ್ದವು ಒಂದೊಂದೇ ಪಾತ್ರ|
    ಕೆನ್ನೆಯ ಮೇಲೆ ಅಚ್ಚಾಗುತ್ತಿತ್ತು ನಾಲ್ಕು ಬೆರಳ ಗಾತ್ರ||

    (ಕ್ಷಮಿಸಿ ನಾ ಹೇಳೋದೆಲ್ಲಾ ತಮಾಷೆಗಾಗಿ)

    ಪ್ರತ್ಯುತ್ತರಅಳಿಸಿ
  2. ಪಂಚಾಯ್ತಿ ಆಗುತ್ತಿತ್ತು ಎಲ್ಲರ ಹತ್ರ...
    ಆ ಮೇಲೆ ಆಗಬೇಕಿತ್ತು ಏಕಪತ್ನಿ ವ್ರತಸ್ಥ..!

    ಈ ಪತ್ರಗಳೆ ಒಂದು ತಾಪತ್ರಯ..
    ಮಾನ ಮರ್ಯಾದೆ ಎಲ್ಲ ಹೋಗಿ ಇದ್ರೂ ಸತ್ತಂತೆಯಾ...!

    ಪ್ರತ್ಯುತ್ತರಅಳಿಸಿ
  3. ನಾಣು,
    ಈ ರೀತಿ ಆಟ ಆಡೋರು ಜಗತ್ ಕಿಲಾಡಿಗಳು...
    ಅದಕ್ಕೆ ಹೆಸರು ಬರೆಯೊಲ್ಲ ಅನ್ನಿಸುತ್ತೆ...
    ಯಾರಿಗೆ ಬೇಕಾದ್ರೂ ಕೊಡಬಹುದು ಅಂತನಾ....ನನಗೊತ್ತಿಲ್ಲಪ್ಪ...
    ಇಲ್ಲೆ ಒಂದು ಕವನ ಬರೆದುಬಿಟ್ಟೆ....ಬರೀತಾ ಇರು ಪ್ರೇಮಪತ್ರ ಸಹ...ಹಹಹಾ


    ಪ್ರಕಾಶಣ್ಣ,
    email, sms ಎಲ್ಲ ಬಂದೂ ಹಾಳೆಯ ಮೇಲೆ ಪ್ರೇಮಪತ್ರ ಬರೆಯೊರೆ ಕಡಿಮೆ ಆಗಿದ್ದಾರೆ..
    ಅಪರೂಪಕ್ಕೆ ಬರೆದರೆ...ಸಿಕ್ಕಿ ಬಿಳೋದಾ...
    ನಾನಂತೂ ಏಕಪತ್ನಿ ವ್ರತಸ್ಥ..!

    ಪ್ರತ್ಯುತ್ತರಅಳಿಸಿ
  4. "ಹೆಸರು ಬರ್ದ್ರೆ ಆಗಿರ್ತಿತ್ತು ಇಷ್ಟೊತ್ತಿಗೆ
    ನಿನ್ನ ಲಗ್ನದ ಮುಹೂರ್ತ "
    ಚೆನ್ನಾಗಿದೆ. ಮುಂದುವರಿಸಿ

    ಪ್ರತ್ಯುತ್ತರಅಳಿಸಿ
  5. @ಪರಾಂಜಪೆಯವರೆ,
    ಸ್ವಾಗತ ಸವಗನಸ ಸವಿಯಲು...
    ಅಡ್ಡ ಹೆಸರು ಬರೆದರೆ ನಡೆಯುತ್ತೆ ಅಲ್ವ...ಚಿನ್ನ, ರನ್ನ....


    @ಮಾಲತಿ ಮೇಡಮ್,
    ಇಂತಹದ್ದು ಮಾಡಬೇಕಾದ್ರೆ ಮೊದಲು ಬಚಾವಾಗಲು ದಾರಿ ಸಹ ಹುಡುಕಿಟ್ಟಿರಬೇಕು ಹಹಹಹಾಹ...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  6. ಸುಧೇಶ್,
    ಜೋಡಿ ಸಿಕ್ಕರೆ ಎಲ್ಲ ಕಿಲಾಡಿಗಳೆ ಹಹಾಹ...
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  7. ಮಹೇಶ್ ಸರ್,

    ಹೀಗೆ ತಿರುಚಿ ಬರೆಯುವುದರಲ್ಲಿ ನೀವು ಎತ್ತಿದ ಕೈ...

    ಪ್ರತ್ಯುತ್ತರಅಳಿಸಿ
  8. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  9. ಶಿವಪ್ರಕಾಶ್,
    ಈಗ ಪ್ರೇಮಪತ್ರಗಳನ್ನು ಕೆಲವರು To whomsoever it may concern ಅಂತ ಬರೀತಾರಂತೆ ಹೌದಾ...
    ಧನ್ಯವಾದಗಳು...
    ಬರುತ್ತಾ ಇರಿ...

    ಪ್ರತ್ಯುತ್ತರಅಳಿಸಿ
  10. ಶಿವು ಸರ್,
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  11. ಹಾ ಹಾ ಸೂಪರ್ ಆಗಿ ಇದೆ ಕವನ.....ಹೆಸರು ಬರೆಯದೇ ಬಚಾವ್ ಅದ್ರಿ......:-)

    ಪ್ರತ್ಯುತ್ತರಅಳಿಸಿ
  12. ಸವಿಗನಸು...
    ಚೆನ್ನಾಗಿ ಬರ್ದಿದೀರ.
    ಸಧ್ಯ ಹೆಸ್ರು ಬರ್ದಿರ್ಲಿಲ್ವಲ್ಲ, ಬಚಾವು :-)

    ಪ್ರತ್ಯುತ್ತರಅಳಿಸಿ
  13. ಶಾಂತಲಾ ಮೇಡಮ್,
    ಸವಿಗನಸಿಗೆ ಸ್ವಾಗತ...
    ಧನ್ಯವಾದಗಳು...
    ಬರುತ್ತಾ ಇರಿ...

    ಪ್ರತ್ಯುತ್ತರಅಳಿಸಿ
  14. ಸೀತಾರಾಮ್ ಸರ್,
    ಧನ್ಯವಾದಗಳು...
    ನಿಮ್ಮ ಬ್ಲಾಗಿನ ಹನಿಗಳೂ ಚೆನ್ನಾಗಿವೆ

    ಪ್ರತ್ಯುತ್ತರಅಳಿಸಿ
  15. :) ಒಳ್ಳೇ ಐಡಿಯಾ ಸರ್... ಒಬ್ಳು ಹುಡುಗಿ ಬೇಡ ಅಂದ್ರೆ ಇನ್ನೊಂದು ಹುಡುಗಿಗೆ ಅಂತ ರೆಸೈಕಲ್ ಮಾಡಬಹುದು, ಪೇಪರ ಉಳಿತಾಯ, ಒಳ್ಳೆ ಪರಿಸರ 'ಪ್ರೇಮಿ' ನೀವು...

    ಪ್ರತ್ಯುತ್ತರಅಳಿಸಿ
  16. ಪ್ರಭು,
    ನಿಮ್ಮkಗೆ ಹೇಳಿ ಬಿಟ್ಟೀರಾ ರಿಸೈಕಲ್ ಕಥೆ ....ನಿಮ್ಮನ್ನು ತರಾಟೆಗೆ ತಗೊಂಡರೂ...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ