ಬುಧವಾರ, ಮಾರ್ಚ್ 04, 2015

ಗಂಟಿಗೆ ನಂಟು

ಮೂರು ಗಂಟಾಕಿ
ಮುತೈದೆಯಾಗಿಸಿದೆ
ಮೂರು ತಿಂಗಳಿಗಷ್ಟೆ
ಮೂವತ್ತಾಯಿತು ಎನಗೆ
ಮೂರು ವರುಷ
ನಿನ್ನ ಕಂದನಿಗೆ
ಕೂತು ತಿನ್ನಲು
ಗಂಟೇನು ಮಾಡದಿದ್ದರೂ
ಮೂರು ತಿಂಗಳ
ನಂಟು ಜನುಮ
ಪೂರ ನೆನಪಿಸುತ್ತೆ
ಒಂಟಿತನ ಕಂಡು
ಮತ್ತೊಮ್ಮೆ ಗಂಟಾಕಿ
ನಂಟನು ಬೆಳೆಸಲು
ಮತ್ತೊಬ್ಬ ಬಯಸಿರುವನು
ಒಪ್ಪಿಗೆ ನೀಡಿದರೆ
ಮುನಿಸೆ ನಿನಗೆ
ಅಪ್ಪನ ಹೆಸರು
ಬೇಕಿದೆ ಶಾಲೆಗೆ
ಯಾವುದು ಕೊಡಲೆಂದು
ಚಿಂತಿಸುತ್ತಿರುವೆ...???