ಬುಧವಾರ, ಫೆಬ್ರವರಿ 03, 2010

ದಿನಾ(ಬಾ)ರು







ಕುವೈತಿನಲ್ಲಿ ಕಣ್ಣಿಗೆ 


ಕಾಣಸಿಗದು ಬಾರು.....



ಅದಕ್ಕೆ ಜೇಬಲ್ಲಿ 


ಉಳಿದಿರುವುದು ದಿನಾರು.....


ಇದ್ರಿಂದ  ಪತ್ನಿಯರು 


ಫಜೀತಿಗಳಿಂದಿರುವುದು ಪಾರು......








.

25 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಹೋಗಲುಇಲ್ಲ ಬಾರು,
    ಉಳಿಯಿತು ಜೇಬಲ್ಲಿ ದಿನಾರು,
    ಬಿಡಲು ಕಾರು
    ಜೊತೆಯಲ್ಲಿ ಪಾರು!!

    ಪ್ರತ್ಯುತ್ತರಅಳಿಸಿ
  3. ಇಲ್ಲದ ಬಾರು
    ಉಳಿಸಿತು ದಿನಾರು
    ಎಲ್ಲರ ಮೊಗದಲ್ಲಿಯೂ ನಗುವಿನ ಮೊಹರು.

    ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  4. ಇಲ್ಲ ಬಾರು
    ಇರುವುದು ಖಾಲಿ ಕಾರು..
    ಅದಕ್ಕೆ ನಿಮ್ಮೆಲ್ಲರದು ಭಾರಿ ಕಾರುಬಾರು!! :-)

    ಪ್ರತ್ಯುತ್ತರಅಳಿಸಿ
  5. ಕುವೈತಿನಲ್ಲಿ "ಪತ್ನಿಯರು" ಇರೋದ್ರಿ೦ದ ಫಜೀತಿಯಾಗುವುದಿದ್ದರೆ "ಪತಿ" ಗೆ ಆಗಬಹುದೇನೋ ? ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  6. ಇಂಡಿಯಾದಲ್ಲಿ ಹಗಲಲ್ಲೂ ಬಾರು ಇರಳಲ್ಲೂ ಬರು
    ಕುಡುಕರದೇ ಕಾರುಬಾರು
    ಮುಂಬೈಯಲ್ಲಿ ಕುಡಿದು ಕುಪ್ಪಳಿಸಿದಳು ತಂಗಿ
    ಕರೆದು ತೊಡಿಸಿದರು ಬಿಳಿಯ ಅಂಗಿ ! [ಜೈಲ್]

    ಪ್ರತ್ಯುತ್ತರಅಳಿಸಿ
  7. ಅಯ್ಯೋ... ಕುವೈತಿನಲ್ಲಿ ಬಾರೇ ಇಲ್ಲವೇ...!

    ಕವನ ಎ೦ದಿನ೦ತೆ ಪ೦ಚಿ೦ಗ್ ಆಗಿದೆ :)

    ಪ್ರತ್ಯುತ್ತರಅಳಿಸಿ
  8. ಏನಣಾ...ಬಾರ್...
    ಕೊಂಡೋಗಿ ಕಾರ್...ಹಹಹ ಚನ್ನಾಗಿದೆ

    ಪ್ರತ್ಯುತ್ತರಅಳಿಸಿ
  9. ಕುವೈತ್ನಲ್ಲಿಲ್ಲ ಬಾರು?
    ನಿಜವಾಗಿಯೂ ಮಹಿಳೆಯರು ಪಜೀತಿಯಿ೦ದ ಪಾರು.
    ಚೆ೦ದದ ಹನಿ

    ಪ್ರತ್ಯುತ್ತರಅಳಿಸಿ
  10. ಮಹೇಶ್..

    ಬಾರು ಬಾರಿಗೂ..
    ಬಾರಿಗೆ ಹೋಗಿ..
    ಬರೀ..
    ಬೀರು ಏರಿಸಿ
    ನಶೆಯೇರಿಸುವದಕ್ಕಿಂತ..
    ನೀರೆಯ
    "ನೀರಾ"ವರಿಯೇ ಮೇಲಲ್ಲವೆ...?

    ನಿಮ್ಮ ಚುಟುಕುಗಳು ಕಿಕ್ಕು ಕೊಡುತ್ತವೆ...

    ಪ್ರತ್ಯುತ್ತರಅಳಿಸಿ
  11. ಮಹೇಶ್ ಸರ್,
    ಇಲ್ಲದೆ ಹೋದ್ರೆ ಬಾರು,
    ತುಂಬಾ ತುಂಬಾ ಬೋರು,
    ಕುಡೀದ್ರೆ ಹೋದ್ರೆ ಬೀರು,
    ನಶೆ ಏರಿಸೋರು ಯಾರು......
    ಚೆನ್ನಾಗಿದೆ ನಿಮ್ಮ 'ಕಾರು' 'ಬಾರು'....

    ಪ್ರತ್ಯುತ್ತರಅಳಿಸಿ
  12. ಮಹೇಶ್ ಸರ್,

    ಈ ರೀತಿಯಾದರೂ ದಿನಾರುಗಳು ಉಳಿಯಿತಲ್ಲ...ಅಷ್ಟೇ ಸಾಕು.

    ಪ್ರತ್ಯುತ್ತರಅಳಿಸಿ
  13. ಶಶಿ,
    ಸುಬ್ರಮಣ್ಯ ಭಟ್,
    ಚುಕ್ಕಿ ಚಿತ್ತಾರ,
    ಮನಮುಕ್ತಾ,
    ರವಿಕಾಂತ ಗೋರೆ,
    ಪರಂಜಪೆ,
    ವಿ.ಆರ್.ಭಟ್,
    ಸುಧೇಶ್ ಶೆಟ್ಟಿ,
    ಜಲನಯನ,
    ಸಾಗರದಾಚೆಯ ಡಾ.ಗುರು,
    ಸೀತಾರಾಂ ಸರ್,
    ಮಾಲತಿ,
    ಪ್ರಕಾಶಣ್ಣ,
    ದಿನಕರ ಮೊಗೇರ.
    ಶಿವು ಸರ್,
    ಶಿವಪ್ರಕಾಶ್

    ಎಲ್ಲರಿಗೂ ಧನ್ಯವಾದಗಳು....
    ನಿಮ್ಮ ಅನಿಸಿಕೆಗಳು ಸದಾ ಹೀಗೆ ಬರುತ್ತಿರಲಿ....

    ಪ್ರತ್ಯುತ್ತರಅಳಿಸಿ
  14. 'ಸವಿಗನಸು' ಅವರೇ..

    'ಹೋಗಬೇಕಿದೆ ಕುವೈತಿಗೆ..
    ತೆರೆಯಲೊಂದು ಬಾರನು..
    ಕಾರುಬಾರಿನ ಸವಿಗನಸು
    ನನಸಾಗಲು..

    ನನ್ನ 'ಮನಸಿನಮನೆ'ಗೆ...:http//manasinamane.blogspot.com

    ಪ್ರತ್ಯುತ್ತರಅಳಿಸಿ
  15. ಶಿವಶಂಕರ,
    ರಾಹುದೆಸೆ,
    ಸ್ನೋವೈಟ್,

    ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳು.....

    ಪ್ರತ್ಯುತ್ತರಅಳಿಸಿ
  16. ಮಾನಸ,
    ದಿವ್ಯ,
    ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  17. ಅಯ್ಯೋ.ಬಾರ್ ಇಲ್ವಾ!!!!!!!!!!! ನಮ್ಮೊರಲ್ಲಂತೂ ಬೀರ್ ಇಲ್ಲದೆ, ಇಲ್ಲಿಯವರಿಗೆ ದಿನಾನೆ ಹೋಗಲ್ಲ!!!!!!!!!!!

    ಪ್ರತ್ಯುತ್ತರಅಳಿಸಿ