ಮಂಗಳವಾರ, ಆಗಸ್ಟ್ 11, 2009

ಕುಡಿತದ ಮಸ್ತಿ


ಬಾಟಲ್ ಕುಲ್ಕಿ...
ಕುಡಿದ ವಿಸ್ಕಿ...

ನಿಶೆ ಉಕ್ಕಿ...
ಮನೆಯೆಡೆ ಹೊಕ್ಕಿ...

ತಟ್ಟಿದ ಬಾಗಿಲ ಕುಕ್ಕಿ ಕುಕ್ಕಿ...
ಬಾಗಿಲ ತೆರೆದಳು ಅವನಾಕಿ...

ಕುಡಿತದಿ ಸೊಕ್ಕಿ...
ತಿಂದದ್ದನ್ನೆಲ್ಲ ಕಕ್ಕಿ ಕಕ್ಕಿ...

ಇದ ಕಂಡವಳು ಇಟ್ಟಳು ಯಕ್ಕಮಿಕ್ಕಿ...
ಆಮೇಲೆ ಸಿಕ್ಕ ಹೆಸರು ಪೊರ್ಕಿ...

ಇಂತದೆಲ್ಲಾ ನಮಗ್ಯಾಕಿ...
ಚಟ ಇದ್ರೆ ಬಿಸಾಕಿ......




4 ಕಾಮೆಂಟ್‌ಗಳು:

  1. ಮಹೇಶ್ ಸರ್,

    ಇದೇನು ಕವನದ ವಸ್ತು ವಿಭಿನ್ನವಾಗಿದೆಯೆಲ್ಲಾ....

    ಪ್ರತ್ಯುತ್ತರಅಳಿಸಿ
  2. ಶಿವು ಸರ್,
    ಮೊನ್ನೆ ಕಟ್ಟೆ ಶಂಕ್ರಣ್ಣನ ಬ್ಲಾಗ್ ನೋಡ್ತಾ ಇದ್ದೆ......ಅದ್ರಲ್ಲಿ ಕುಡಿದು ರಸ್ತೆ ಬದಿ ಮಲಗಿರೊ ಆಸ್ಸಾಮಿಗಳ ಫೋಟೋಗಳನ್ನ ಹಾಕಿದ್ರು..... (ಬಹಳ ಹಿಂದೆ ಹಾಕಿರೋದು...ನಾನು ನೋಡಿದ್ದು ಮೊನ್ನೆ)ಅದ ನೋಡಿ ಹಾಗೆ ಬರೆದಿದ್ದು......
    ಪ್ರತಿಕ್ರಿಯೆಗೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  3. ಮಹೇಶ್...

    ಅಪರೂಪಕ್ಕೊಂದು ರಾತ್ರಿ..
    ತಣ್ಣನೆಯಗಾಳಿಯಲ್ಲಿ..
    ಇಂಪಾದ..
    ಮಧುರ ಸಂಗೀತದಲಿ..
    ನಿಧಾನವಾಗಿ ಪೆಗ್ ಜೊತೆಯಲಿ...
    ಮತ್ತೇರಿಸುವ ಮನದನ್ನೆಯೊಡನೆ......
    ಸ್ವರ್ಗ ಲೋಕದ ರುಚಿ ಅನುಭವಿಸಲಿ ಬಿಡಿ...

    nimma kavana sooper...

    thank you...

    ಪ್ರತ್ಯುತ್ತರಅಳಿಸಿ
  4. ಪ್ರಕಾಶಣ್ಣ,
    ಬೆಳದಿಂಗಳ ರಾತ್ರಿಯಲಿ...
    ತಣ್ಣನೆ ಗಾಳಿಯಲಿ..
    ಮಧುರ ಸಂಗೀತದಲಿ..
    ಪೆಗ್ ಜೊತೆಯಲಿ...
    ಅದರ ಮಜಾ ಹೇಗಿರುತ್ತೆ ಅಂತ ಮುಂದೆ ಬರೆಯೋಣ...
    ಈಗ ಕುಡಿಯೋದು ಬಿಟ್ಟವರು ಆಗ ಶುರು ಮಾಡ್ತಾರೆ.....
    ಮೆಚ್ಚುಗೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ