ಭಾನುವಾರ, ನವೆಂಬರ್ 15, 2009

ಯೌವನ




ಜಾರಿ ಹೋಗುತ್ತಿರುವುದು ಯೌವನ

ಕುಪ್ಪಳಿಸು ಎನ್ನುತ್ತಲಿರುವುದು ಮನ....


ಮಾಯವಾಗುತ್ತಿರುವುದು ಮೋಹ

ಉಳಿಯದಿರದಿನ್ನು ಉತ್ಸಾಹ....


ಇಲ್ಲಿತನಕ ಮನವಾಗಿತ್ತು ಜಿಂಕೆ

ಮುಂದೆನಾಗುವುದೊ ಎಂಬ ಶಂಕೆ....


ನಲಿಯುತ್ತಿತ್ತು ಮನ ಬಂದಾಗ ಹುಟ್ಟುಹಬ್ಬ

ಅರಿಯದಾಗಿತ್ತು ಕಣ್ಣಿನ ಮಬ್ಬ...


ಚಿಂತಿಸಿದರೆ ಇನ್ನು ಹೆಚ್ಚು

ಹಿಡಿಯುವುದು ಮನಕೆ ಹುಚ್ಚು....


ಯೌವನದ ಉಲ್ಲಾಸ ದಿನಗಳು

ಮೆಲುಕಲು ಆಗುವವು ಸವಿನೆನಪುಗಳು.....




23 ಕಾಮೆಂಟ್‌ಗಳು:

  1. ದಿನಗಳು ಹೇಗೆ ಹೋಗ್ತಾ ಇವೆ ಅಂತ ತುಂಬಾ ಚೆನ್ನಾಗಿ ಹೇಳಿದ್ದಿರಿ... ಮೊನ್ನೆ ಮೊನ್ನೆ ಆಯಿತು ಬಾಹುಬಲಿಗೆ ಮಜ್ಜನ... ಮೊನ್ನೆ ಮೊನ್ನೆ ಅಂದ್ರೆ ೧೨ ವರ್ಷಗಳು... ಶಾಲೆನಲ್ಲಿ ಓದಿದ ಸಾಲುಗಳು ನೆನಪಾಯಿತು...
    ಲೈಫ್ನಲ್ಲಿ rewind option eddidre ಚೆನ್ನಾಗಿ ಇರ್ತ್ತಿತಲ್ಲ... :)

    ನಿಮ್ಮವ,
    ರಾಘು.

    ಪ್ರತ್ಯುತ್ತರಅಳಿಸಿ
  2. ರಾಘು,
    ಲೈಫ್ನಲ್ಲಿ rewind option ಇದಿದ್ರೆ ಚೆನ್ನಾಗಿ ಇರುತಿತ್ತು.......
    ಹಾಗೆ ಸಹ fast forward ಇದಿದ್ರೆ ಎಲ್ಲರೂ ಯೌವನವನ್ನೆ ಆಯ್ಕೆ ಮಾಡ್ತಾ ಇದ್ರೊ ಎನೊ....
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  3. ಚೆನ್ನಾಗಿದೆ ಸರ್, ಯೌವನ ಕಳೆದು ಹೋಗುತ್ತದೇನೊ ನಿಜ, ಮುಖ ಸುಕ್ಕುಗಟ್ಟಿ, ನಡೆ ಸ್ಥಿರತೆ ತಪ್ಪಿ, ಕಣ್ಣು ಮಬ್ಬಾಗಿ, ಕಿವಿ ಕೇಳದಾಗಿ... ಅದರೂ ಮನಸ್ಸಿಗೆ ಮುಪ್ಪು ಬಾರದಂತೆ ತಡೆಯಬಹುದಲ್ಲವೇ...

    ಪ್ರತ್ಯುತ್ತರಅಳಿಸಿ
  4. ಪ್ರಭು,
    ನೀವು ಹೇಳೊದು ನಿಜ...
    ಯೌವನ ಕಳೆದು ಹೋಗಬಹುದು...ಅದರೆ ಮನಕ್ಕೆ ಎಂದು ಸಹ ಮುಪ್ಪು ಇಲ್ಲ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  5. ಮಹೇಶ್ ಸರ್,
    ಮೊನ್ನೆಯ ಕುವೈತ್ ಕನ್ನಡ ಹಬ್ಬದಲ್ಲಿ ನಿಮ್ಮ ಫೋಟೋ ನೋಡಿ ಖುಷಿಯಾಯ್ತು .... ಈ ಕವನ ನೋಡಿ ಗಾಬರಿಯಾಯ್ತು.... ಆದರೂ ಇದು ಸತ್ಯ..... ಕಳೆದು ಕಳೆದು ಯೌವನ, ಮುಗಿದೇ ಹೋಗತ್ತೆ ಜೀವನ.......

    ಪ್ರತ್ಯುತ್ತರಅಳಿಸಿ
  6. ಹೆದರಿಕೆಯಾಗುತ್ತಪ್ಪ !!!! :(
    ಹೆದರಿಸಿದರೂ, ನಿಮ್ಮ ಕವನ ಚನ್ನಾಗಿದೆ :)

    ಪ್ರತ್ಯುತ್ತರಅಳಿಸಿ
  7. ದಿನಕರ್,
    ಕನ್ನಡ ಹಬ್ಬದಲ್ಲಿ ನನ್ನ ಫೋಟೋನಲ್ಲಿ ಕಂಡು ಹಿಡಿದಿದ್ದೀರ.....
    ಜೀವನ ಮುಗಿಯುವುದರ ಜೊತೆ ಅನುಭವ ಸಹ ಆಗುತ್ತೆ ಅಲ್ವ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  8. ಶಿವು,
    ಹೆದರಿಕೆ...
    ನಿನಗೆಕೆ....
    ತಲೆಗೆ ಬಣ್ಣವಿರುವುದು...
    ಮುಖಕ್ಕೆ ಪಾರ್ಲರ್ ಇರುವುದು....
    ಹೆದರದಿರು....
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  9. wow ತುಂಬ ಚೆನ್ನಾಗಿದೆ ಕವನ
    :-)
    ಮಾಲತಿ ಎಸ್.

    ಪ್ರತ್ಯುತ್ತರಅಳಿಸಿ
  10. live life king size. ದಿನ enjoy ಮಾಡಬೇಕು life ನ ಅಲ್ಲವಾ?
    :-)
    malathi S

    ಪ್ರತ್ಯುತ್ತರಅಳಿಸಿ
  11. ಮಾಲತಿ,
    ನೀವೇಳೋದು ನಿಜ.....ನಾಳೆ ಯಾರು ಇರುತ್ತಾರೊ?
    Live for today...
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  12. ಹೇ.... ಅಪರೂಪಕ್ಕೆ ಹನಿಗವನ ಬಿಟ್ಟು ಕವನ ಬರೆದಿದ್ದೀರಿ.... ಆದರೂ ತು೦ಬಾ ಚೆನ್ನಾಗಿದೆ ಇದೆ... ಒ೦ದು ನಾನು ಥಿ೦ಕ್ ಮಾಡುವ ಹಾಗೆ ಮಾಡಿತಲ್ಲ ನಿಮ್ಮ ಕವನ :)

    ಪ್ರತ್ಯುತ್ತರಅಳಿಸಿ
  13. ಸುಧೇಶ್,
    ಹನಿಗವನಗಳ ಮಧ್ಯ ಈ ತರಹನೂ ಸ್ವಲ್ಪ ಇರಲಿ ಅಂತ......
    ಚಿಂತೆ ಮಾಡಬೇಡಿ....ಕಾಲವನ್ನು ತಡೆಯೋರು ಯಾರು ಇಲ್ಲ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  14. ಸವಿಗನಸು,
    ಕ್ಷಣಗಳು, ದಿನಗಳು, ವರುಷಗಳು ಹಾಗೇ ಉರುಳಿ ಹೋಗುತ್ತವೆ..
    ಕಡೆಗೆ ಉಳಿಯುವುದು ಸವಿ ನೆನಪುಗಳು ಮಾತ್ರ ..
    ಚೆಂದದ ಕವನ..

    ಪ್ರತ್ಯುತ್ತರಅಳಿಸಿ
  15. ದಿವ್ಯ,
    ಸವಿನೆನಪುಗಳು ಬೇಕು...
    ಸವಿಯಲು ಈ ಬದುಕು.....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  16. ಮಹೇಶ್, ಯಾವ ದಿನ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೋಗಿ ಶಂಕೆ ಆಗುತ್ತೋ ಅಂದಿಗೆ...ನೀವು ನಿಮ್ಮನ್ನ ವಯಸ್ಸಾದವರಂತೆ ಕಾಣುತ್ತೀರಿ...ಏನಂತೀರಿ?
    ಇದಕ್ಕೆ ನಾನು ಭಾವ್ ಮಂಥನದಲ್ಲಿ ಕವನಗಳನ್ನು ಹಾಕಿದ್ದೇನೆ ನೋಡಿ, ನಿಮ್ಮ ಭಾವಕ್ಕೆ ಭಾವ ಕೂಡಿದೆ ಎಂದರೆ ಪ್ರತಿಕ್ರಿಯಿಸಿ ಇಲ್ಲ-ಟೀಕಿಸಿ.

    ಪ್ರತ್ಯುತ್ತರಅಳಿಸಿ
  17. ಅಝಾದ್ ಸರ್,
    ಭಾವಮಂಥನ ನೋಡಿದೆ...ಚೆನ್ನಾಗಿದೆ...ಭಾವ ಕೂಡಿದೆ...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  18. ಹೊಸ ವರುಷಕೆ ಹೊಸ ವಸ೦ತ ನಮಗೆ ಎಕೆ ಬಾರದು ಎ೦ದು ಬೆ೦ದ್ರೆಮಾಸ್ತರು ಮಾರನಿಗೆ ಕೇಳಿದ ಪ್ರಶ್ನೆ ಜ್ಞಾಪಕವಾಯಿತು.
    ವರುಷ ಕಳೆದ೦ತೆ ಚದುರುವ ಯೌವನವನ್ನ ಚಿತ್ತಾರದಲ್ಲಿ ಹೆಣೆದಿದ್ದಿರಾ! -ಮಹೇಶ

    ಪ್ರತ್ಯುತ್ತರಅಳಿಸಿ
  19. ಸೀತಾರಾಮ್ ಸರ್,
    ವರುಷ ಕಳೆದದ್ದು ...
    ಮತ್ತೆ ಮರುಕಳಿಸದು....
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ