ಮಂಗಳವಾರ, ನವೆಂಬರ್ 24, 2009

ನೆನೆಸು
ನೀ ಹೇಳಿದೆ

ಮತ್ತೆಂದೂ

ಅವಳನ್ನು

ನೆನೆಸಬೇಡ ಎಂದು....


ಆ ತುಂತುರು

ಹನಿ ಬಿದ್ದಾಗ

ತೋಳಿನಲ್ಲಿ ಬಂಧಿಸಿ

ಅವಳನ್ನು ನೆನೆಸಲಿಲ್ಲ ಅಂದು.....


35 ಕಾಮೆಂಟ್‌ಗಳು:

 1. ನೆನೆವುದು-ನೆನೆಸುವುದು..ಎರಡನ್ನೂ ಬೆಸೆದು ಒಳ್ಲೆಯ ಚುಟುಕ ಹುಟ್ಟಿದೆ...ಅಂತೂ ಮಹೇಶ್...ಬ್ಲಾಗ್ ಲೋಕದ ಚೋಟ್ಮೆಣ್ಸಿನಕಾಯ್...ಅಗ್ತಿದ್ದೀರ....ಮನಸು ಅವ್ರಿಗೆ ಹುಷಾರಾಗಿರಿ ಅಂತ ಹೇಳ್ಬೇಕು...

  ಪ್ರತ್ಯುತ್ತರಅಳಿಸಿ
 2. ಹಮೇಶ್...

  ನಿನ್ನ
  ನೆನೆ ನೆನೆದು..
  ನೆನಪಾಗಿ..
  ಕಣ್ಣೆಲ್ಲ ಒದ್ದೆಯಾಯ್ತಲ್ಲ....

  ಬಹಳ ಸೊಗಸಾದ ಚುಟುಕು,...
  ಅಭಿನಂದನೆಗಳು..
  ....................................
  ..................................
  ಅಂದು ಪುಸ್ತಕ ಬಿಡುಗಡೆಯ ಸಂಭ್ರಮದಲ್ಲಿದ್ದಾಗ ನಿಮ್ಮ
  ಶುಭಾಶಯ ಬಂದಿತ್ತು...
  ಬಿಡುಗಡೆ ಆಗುವ ಸಮಯದಲ್ಲಿ..
  ನನಗೆ ಸಿಕ್ಕಿದ್ದು ನಿಮ್ಮ ಶುಭಾಶಯವೇ ಮೊದಲು...

  ನಿಮ್ಮ ಸಂದೇಶ ಆಪ್ತವಾಗಿತ್ತು...


  ನಿಮ್ಮ ಸ್ನೇಹಕ್ಕೆ, ಬಾಂಧವ್ಯಕ್ಕೆ ನಾನು ಚಿರಋಣಿ...

  ಪ್ರತ್ಯುತ್ತರಅಳಿಸಿ
 3. ಮಹೇಶ್ ಸರ್,
  ನೆನೆದೆ,
  ನೆನೆಸಿದೆ,
  ನೆನೆಯಿಸಿದೆ,
  ನೆನೆಪಿಸಿದೆ,
  ನೆನಪಾದೆ,
  ನಿಮ್ಮ ಪದಗಳ ಜೊತೆ ಸರಸ ಚೆನ್ನಾಗಿದೆ......

  ಪ್ರತ್ಯುತ್ತರಅಳಿಸಿ
 4. ಒ೦ದು ಕ್ಷಣ ತಮ್ಮ ನೆನಸು -ನೆನಿಸು ನಮ್ಮನ್ನು ಚೌಕಾಯಿಸಿತು. ಶಬ್ದಗಳೊಡಣೆಯ ತಮ್ಮ ಸರಸ ಈ ಕವನದಲ್ಲಿ ಸರಳತೆಯಲ್ಲಿ ಮಿ೦ಚಿದೆ.

  ಪ್ರತ್ಯುತ್ತರಅಳಿಸಿ
 5. ಅಝಾದಣ್ಣ,
  ಧನ್ಯವಾದಗಳು....
  ಚೋಟ್ಮೆಣ್ಸಿನಕಾಯ್ ಖಾರ ಅಲ್ವ...ಆಮೇಲೆ ಯಾರು ಹತ್ತಿರ ಬರೊಲ್ಲ....ಹಹ್ಹಹಾಹ..

  ಪ್ರತ್ಯುತ್ತರಅಳಿಸಿ
 6. ಆಕಾಶಬುಟ್ಟಿ,
  ಸವಿಗನಸ ಲೋಕಕ್ಕೆ ಸ್ವಾಗತ...
  ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 7. ಮಹೇಶ್,
  ನೆನೆಯುವುದು ನೆನೆಸುವುದು
  ನೆನೆಯದೆ ನೆನೆಸುವುದು,
  ನೆನೆದರೂ ನೆನೆಸುವುದು
  ತುಂಬಾ ಚೆನ್ನಾಗಿದೆ ಕವಿತೆ

  ಪ್ರತ್ಯುತ್ತರಅಳಿಸಿ
 8. ಧನ್ಯವಾದಗಳು ಪ್ರಕಾಶಣ್ಣ,
  ನಿಮ್ಮ ಸಮಾರಂಭದ ದಿನ ನಿಮ್ಮನ್ನು ಬಹಳ ನೆನೆಸಿದೆವು....
  ನಿಮ್ಮ ಸ್ನೇಹ ಬಾಂಧವ್ಯಕ್ಕೆ ನಾವು ಸಹ ಋಣಿ....

  ಪ್ರತ್ಯುತ್ತರಅಳಿಸಿ
 9. ದಿನಕರ್,
  ಧನ್ಯವಾದಗಳು...
  ಸ್ನೇಹದ ಬಾಂಧವ್ಯ ಸದಾ ನೆನೆಯುತ್ತಲಿರಲಿ....

  ಪ್ರತ್ಯುತ್ತರಅಳಿಸಿ
 10. ಸೀತಾರಾಮ್ ಸರ್,
  ಕ್ಷಣದಲ್ಲಿ ನೆನೆದು ಪ್ರತಿಕಿಯಿಸಿದಕ್ಕೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 11. ಮಹೇಶ ಅವರೇ,
  ಇದರಲ್ಲಿ ಬಹಳಷ್ಟು ಅರ್ಥ ಅಡಗಿದೆ...
  ಅಲ್ವಾ.. ? :)

  ಪ್ರತ್ಯುತ್ತರಅಳಿಸಿ
 12. ಡಾ.ಗುರು,
  ನೆನೆದು ನೆನೆಸುವುದು...ಚೆನ್ನಾಗಿದೆ
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 13. ಶಿವು,
  ಎನರ್ಥ ಅಡಗಿದೆ ನನಗೇನೂ ತಿಳಿಲಿಲ್ಲಪ್ಪ...ಹಹಹ್ಹಾ...
  ನಿನಗೆ ತಿಳಿದಿದ್ರೆ ಹೇಳಪ್ಪ...
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 14. ಸವಿಗನಸು, :)
  ಸವಿಗನಸು ಸವಿ ಸವಿಯಾದ ಸವಿನುಡಿಯಾಗಿದೆ... ನೂತನ ಉಸ್ಸಾಹದ ಬಂಧನದಲ್ಲಿ ನೆನೆದಾಗಿದೆ... ನವಿ ನವಿರಾದ ಕನಸು ತನು ಮನ ತುಂಬಿದೆ..
  ನಿಮ್ಮವ,
  ರಾಘು.

  ಪ್ರತ್ಯುತ್ತರಅಳಿಸಿ
 15. ಸವಿಗನಸು ಅವ್ರೆ..

  ಹೌದೌದು..

  --http://balipashu.blogspot.com/2009/11/blog-post.html

  ಪ್ರತ್ಯುತ್ತರಅಳಿಸಿ
 16. ರಘು,
  ತನು ಮನ ತುಂಬುವ ನವಿರಾದ ಕನಸು ಸವಿಗನಸು....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 17. ಚ೦ದ ಉ೦ಟು ಈ ಹನಿಗವನ....

  ಇದೆಲ್ಲಾ ಸೇರಿಸಿ ಒ೦ದು ಪುಸ್ತಕ ಮಾಡಿಬಿಡಬಹುದು ಮಹೇಶ್ ಅವರೇ...

  ಪ್ರತ್ಯುತ್ತರಅಳಿಸಿ
 18. ಚೆನ್ನಾಗಿದೆ...
  ಹಾಗಿರಬೇಕು ಕಣ್ರೀ!, ನೀವು ನೆಂದ್ರೂ ಪರವಾಗಿಲ್ಲ... :)

  ಪ್ರತ್ಯುತ್ತರಅಳಿಸಿ
 19. ಸುಧೇಶ್,
  ಪುಸ್ತಕ ಮಾಡುವಷ್ಟು ಬರೆದಿಲ್ಲಪ್ಪ ನಾನು.....
  ಅನುಭೂತಿ ಮೊದಲು ಪುಸ್ತಕವಾಗಲಿ.....
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 20. ಆನಂದ್,
  ಸವಿಗನಸ ಲೋಕಕ್ಕೆ ಸ್ವಾಗತ...
  ನಾವು ಮನದಲ್ಲಿ ನೆನೆಯಬೇಕಾ...? ಮಳೆಯಲ್ಲಿ ನೆನೆಯಬೇಕಾ? ಹಹ್ಹಹ್ಹಹ
  ಚೆನ್ನಾಗಿ ಹೇಳಿದ್ರಿ..ನಾವು ನೆನೆದ್ರೂ ಪರವಾಗಿಲ್ಲ ಅಂತ...
  ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 21. ಮಾಲತಿ,
  ಸವಿಗನಸಿನಲ್ಲಿ ಮಾತ್ರ ನಾನು ಹಾಗೆ....
  Not Really...hahaha
  ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 22. ಮಹೇಶ್ ಸರ್,

  ಚುಟುಕುಗಳನ್ನು ನೀವು ಚೆನ್ನಾಗಿ ಬರೆಯುತ್ತೀರಿ. ನೆನೆಸುವುದು ಅನ್ನುವ ಪದ ಪ್ರಯೋಗವನ್ನು ಚೆನ್ನಾಗಿ ಮಾಡಿದ್ದೀರಿ.

  ಪ್ರತ್ಯುತ್ತರಅಳಿಸಿ
 23. ಅನುಕೂಲ ಸಿಂಧುವಿನ ಮೊರೆ ಹೋಗಿ ನಿಮಗೆ ಬೇಕಾದ ಹಾಗೆ ಬದಲಾಯಿಸಿಕೊಂಡು ಬಿಟ್ರಿ ಅಲ್ವಾ ಪದದ ಅರ್ಥ ? :) ಚೆನ್ನಾಗಿದೆ :

  ಪ್ರತ್ಯುತ್ತರಅಳಿಸಿ
 24. ಶಿವು ಸರ್,
  ಧನ್ಯವಾದಗಳು.....
  ಹೀಗೆ ನಮ್ಮ ನೆನೆದು ಬರುತ್ತ ಇರಿ ಬರೆಯುತ್ತ ಇರಿ......

  ಪ್ರತ್ಯುತ್ತರಅಳಿಸಿ
 25. ಗೌತಮ್,
  ಸವಿಗನಸ ಲೋಕಕ್ಕೆ ಸ್ವಾಗತ.....
  ಕೆಲವು ಪದಗಳೆ ಹಾಗೆ ಅನುಕೂಲಕ್ಕೆ ತಕ್ಕ ಹಾಗೆ ಬಳಸಬಹುದು ಅಲ್ಲವ.....
  ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 26. ನಿಶಾ,
  ಸವಿಗನಸ ಲೋಕಕ್ಕೆ ಸ್ವಾಗತ.....
  ಧನ್ಯವಾದಗಳು.....
  ಬರುತ್ತಾ ಇರಿ....

  ಪ್ರತ್ಯುತ್ತರಅಳಿಸಿ
 27. ಸೂಪರ್.. ಸವಿಗನಸನ್ನು ನೆನೆಸೊ ಹಾಗೆ ಬರೆದಿದ್ದೀರಾ :) ಮನಸು ಗೊತ್ತು, ಅಂದ ಹಾಗೆ ನೆನಸು ಯಾರು? ಮನಸು ಮುನಿಸಿಕೊಂಡ್ರೂ ಪರವಾಗಿಲ್ಲ ನಮಗೆ ಹೇಳಿಬಿಡಿ ಬಾಸು...

  ಪ್ರತ್ಯುತ್ತರಅಳಿಸಿ
 28. ಪ್ರಭು,
  ಅವಳನ್ನು ನೆನೆಸಿದರೂ ನನ್ನಾK ಗೆ ಮುನಿಸು....
  ಅವಳನ್ನು ನೆನೆಸದೆ ಇದ್ದರೂ ನನ್ನಾK ಗೆ ಮುನಿಸು....
  ಅದಕ್ಕೆ ಈಗ ನೆನೆಯೋದು ಬೇಡ....
  ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ