ಮಂಗಳವಾರ, ಜೂನ್ 01, 2010

ಹೆಲ್ಮೆಟ್ಟು




ಪಲ್ಸರಿನಲ್ಲೆ ಪಾರ್ಕಿಗೋಗಲು

ಪದ್ದು ಹಿಡಿದಳು ಪಟ್ಟು.....


ಪಕ್ಕದಲ್ಲಿ ಇದ್ದದ್ದು


ತರ್ಕಾರಿ ಮಾರ್ಕೆಟ್ಟು....


ಎದುರಲ್ಲಿ ಬಂದವಳಿಗೂ


ನನ್ನಾಕೆಗೂ ಸ್ನೇಹದ ನಂಟು....


ಅವಳ್ಕಣ್ಣ ತಪ್ಸಿದ್ದು


ನನ್ ಕೂಲಿಂಗ್ಲಾಸು ಹೆಲ್ಮೆಟ್ಟು.....





33 ಕಾಮೆಂಟ್‌ಗಳು:

  1. ಭಲೇ ಹುಷಾರಿದ್ದೀರಿ ಬಿಡಿ ನೀವು !.

    ಪ್ರತ್ಯುತ್ತರಅಳಿಸಿ
  2. ಹೆಲ್ಮೆಟ್ಟಿನ ಒಳಗಿನಿಂದಲೇ ಏನೆಲ್ಲಾ ಕರಾಮತ್ತು!

    ಪ್ರತ್ಯುತ್ತರಅಳಿಸಿ
  3. ನಿಮ್ಮನೆಯವರ ಗೆಳತಿನ್ನ ನೀವ್ಯಾಕ್ರೀ ಕಣ್ಣ ತಪ್ಪಿಸಬೇಕು. ಅವಳು ನಿಮ್ಮ ಗೆಳತಿನೆ ಇರ್ಬೇಕು ಇದು ನನ್ನ ಅನುಮಾನ!
    ಚೆ೦ದದ ಚುತುಕು ಸ್ವಲ್ಪ ತಪ್ಪಾಗಿ ಬೆರಳಚ್ಚಾಗಿದೆ-"ಎದುರಲ್ಲಿ ಬಂದವಳಿಗೂ ನನ್ನಾಕೆಗೂ ಸ್ನೇಹದ" ಇದು "ಎದುರಲ್ಲಿ ಬಂದವಳಿಗೂ ನನಗೂ ತು೦ಬಾ ಹಳೇ ನಂಟು...." ಅ೦ಥಾ ಅಗ್ಬೇಕ್ಕಿತ್ತು!

    ಪ್ರತ್ಯುತ್ತರಅಳಿಸಿ
  4. ಸುಬ್ರಮಣ್ಯ,
    ಇಂಥಹ ಕೆಲಸ ಮಾಡುವವರು ಹುಷಾರಾಗೆ ಇರ್ತಾರೆ ಅಲ್ವ...
    ಧನ್ಯವಾದಗಳು....

    ವನಿತಾ,
    ಮಾಡುದ್ದು ಸೂಪರ್ha ಅಥವಾ ಬರೆದದ್ದು ಸೂಪರ್ha....
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  5. ಡಾ.ಕೃಷ್ಣಮೂರ್ತಿ,
    ಸರ್ಕಾರದ ಕಡ್ಡಾಯ ಹೀಗೆಲ್ಲಾ ಉಪಯೋಗ ಆಗುತ್ತೆ ನೋಡಿ....
    ಧನ್ಯವಾದಗಳು...


    ಕುಸು ಮುಲಿಯಾಳ,
    ಪ್ರತಿಕ್ರಿಯೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  6. ಸೀತಾರಾಮ್ ಸರ್,
    ನನ್ನಾಕೆಯ ಗೆಳತಿ ನನ್ನಾಕೆಯ ಬಳಿ ಚಾಡಿ ಹೇಳಿದರೆ ಆಮೇಲೆ ಗೋವಿಂದ... ಅದಕ್ಕೆ ಅವಳ್ಕಣ್ಣ ತಪ್ಸಿದ್ದು
    ನಿಮ್ಮ ಸಲಹೆನೂ ಸರಿ ಇದೆ...ಆದ್ರೆ ಎದುರಲ್ಲಿ ಬಂದದ್ದು ನನ್ನಾಕೆಗೆ ಹೆಚ್ಚು ಪರಿಚಯದವಳು ಆದ್ರೆ ಚೆಂದ ಅನ್ನಿಸಿತು ಅದಕ್ಕೆ ಹಾಗೆ ಇಟ್ಟಿದ್ದೀನಿ...
    ಸಲಹೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  7. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  8. ಅಂತೂ ಹೆಲ್ಮೆಟ್ಟು, ಕೂಲಿಂಗ್ಲಾಸು ನಿಮ್ಮ ಮಾನ ಉಳಿಸ್ತು ಅನ್ನಿ.
    ಅಲ್ಲಾ.....
    ನಿಮಗ್ಯಾಕೆ ಬೇಕಿತ್ತು ಪದ್ದುವಿನ ಪ್ರಸಂಗ?

    ಪ್ರತ್ಯುತ್ತರಅಳಿಸಿ
  9. ಬಾರಿ ಬೆರಕಿ ಅದೀರೀ ಕಣ್ರೀ ನೀವು :)

    ಪ್ರತ್ಯುತ್ತರಅಳಿಸಿ
  10. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  11. ರವಿಕಾಂತ್,
    ಪ್ರತಿಕ್ರಿಯೆಗೆ ಧನ್ಯವಾದಗಳು..


    ಪ್ರವೀಣ್,
    ಹೆಲ್ಮೆಟ್ಟು, ಕೂಲಿಂಗ್ಲಾಸು ಬಹು ಉಪಯೋಗಿ......
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  12. ಮಹೇಶ್ ,
    ಭಾರಿ ಕಿಲಾಡಿ ಕಣ್ರೀ..

    ನಿಮ್ಮ ಈ ಗುಟ್ಟು
    ನಾ ಮಾಡಲೇ ರಟ್ಟು
    ಪತ್ನಿ ಕೈಲಿ ನಿಮ್ಮ ಜುಟ್ಟು ,
    ಆಮೇಲೆ ನಿಮಗೆ ಬಿಳುತ್ತೆ ಪೆಟ್ಟು......

    ಪ್ರತ್ಯುತ್ತರಅಳಿಸಿ
  13. mahesha sir,
    gr8 escape........ next time nanna pulsar bike mele hoguvaaga cooling glass haakodanna mareyalla........... hha hhaaaaa

    ಪ್ರತ್ಯುತ್ತರಅಳಿಸಿ
  14. ಮಾನಸ,
    ಪದ್ದು ಸಂಗಡ ಸೇರಿ ಹೀಗಾಗಿರಬಹುದಾ....
    ಥ್ಯಾಂಕ್ಸ್ ಕಣ್ರೀ...


    ಮಾಲತಿ,
    ಪ್ರತಿಕ್ರಿಯೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  15. ಶಶಿ,
    ಕಿಲಾಡಿ ಯಾವಾಗಲೂ ಜುಟ್ಟು ಕೊಟ್ಟು ಪೆಟ್ಟು ತಿನ್ನೊಲ್ಲ...ಹಹಾಹಹ
    ಪ್ರತಿಕ್ರಿಯೆಗೆ ಧನ್ಯವಾದಗಳು...


    ದಿನಕರ್,
    ಗ್ಲಾಸಿನ ಜೊತೆ ಹೆಲ್ಮೆಟ್ ಸಹ ಇರಲಿ...ಹಹಾಹ
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  16. ಮಹೇಶ್...

    ಛೇ...
    ಪದ್ದಿ
    ಕೊಡುವ
    ಗುದ್ದು..
    ತಪ್ಪಿಹೋಯಿತಲ್ಲ !

    ಬಹಳ ಸೊಗಸಾದ ಚುಟುಕು...!!

    (ನಿಮ್ಮ ಅಪ್ ಡೇಟ್ ಗಳು ನನಗೆ ಗೊತ್ತಾಗುವದೇ ಇಲ್ಲ...)

    ಪ್ರತ್ಯುತ್ತರಅಳಿಸಿ
  17. ಎಷ್ಟು ಸಲ ಅಂತ ತಪ್ಪಿಸಿಕೊಳ್ತಿರ. ಹೇ ಹೇ ಹೇ
    ನಿಮ್ಮವ,
    ರಾಘು.

    ಪ್ರತ್ಯುತ್ತರಅಳಿಸಿ
  18. ಸುಧೇಶ್,
    ಶಿವ ಶಿವ ಎಂದರೆ ಭಯವಿಲ್ಲ...ಹಾಡು ಗೊತ್ತ..?
    ಧನ್ಯವಾದಗಳು...

    ಪ್ರಕಾಶಣ್ಣ,
    ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ಬರಬೇಕಲ್ವ ಅಪ್ ಡೇಟ್ ಗಳು...
    ಧನ್ಯವಾದಗಳು...

    ರಾಘು,
    ಜಾಸ್ತಿ ಪಾರ್ಕಿಗೆ ಹೋಗಲ್ವಲ್ಲ.....
    ಹೇ ಹೇ ಹೇ...

    ಪ್ರತ್ಯುತ್ತರಅಳಿಸಿ
  19. ಮಯೇಸಣ್ಣ ಯಾಕೋ ಕತೆ ಎಡ್ವಟ್ಗೆ ತಿರ್ಗೊಂಗೆ ಕಾಣ್ತದೆ...ಅಲ್ಲಪ್ಪಾ.... ಅದ್ಕೇನೇಯಾ ಯಾಕೆ ಈವಯ್ಯಾ ಮಳೆ ಬರ್ತಾ ಇದ್ರೂ ಕೂಲಿಂಗ ಹಾಕವನೆ ಅಂತ...ಹಹಹಹ
    ಚೇಳು ಕುಟ್ಕೈತೆ ಬಿಡು...

    ಪ್ರತ್ಯುತ್ತರಅಳಿಸಿ
  20. ಅಜಾದಣ್ಣ,
    ಮಳೆನಲ್ಲಿ ಕೂಲಿಂಗ್ ಹಾಕೊಂಡ್ರೆ ಕಣ್ಣು ಕಾಣೊಲ್ವೇನೊ ಪಾಪ ಅನ್ಕೊತ್ತಾರೆ...
    ಟ್ಯಾಂಕ್ಸ್ ಕಣಣ್ಣೊ....


    ಶಿವು ಸರ್,
    ಹೆಲ್ಮೆಟ್ ನ ಸದುಪಯೋಗೆ ಅಷ್ಟೇ....
    ಧನ್ಯವಾದಗಳು....


    ಡಾ.ಗುರು,
    ನಿಮ್ಮ ಆಗಮನಕ್ಕೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  21. @ಚುಕ್ಕಿಚಿತ್ತಾರ,
    @ಸ್ನೋವೈಟ್,
    @ದೀಪಸ್ಮಿತ,

    ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  22. ಉತ್ತಮವಾಗಿದೆ.ನನ್ನ ಭಾವ ಲೋಕಕ್ಕೆ ಒಮ್ಮೆ ಬನ್ನಿ, ತಮಗಿದೋ ಸವಿನಯ ಆಮಂತ್ರಣ....http://spn3187.blogspot.in/

    ಪ್ರತ್ಯುತ್ತರಅಳಿಸಿ