ಶುಕ್ರವಾರ, ಜನವರಿ 20, 2012

ಅರ್ಪಣೆ

ನನ್ನ ಬದುಕಿನಲ್ಲಿ ಹೊಸ ಮಜಲುಗಳನ್ನೇ ಸೃಷ್ಟಿಸಿದ ನನ್ನ ಬಾಳ ಸಂಗಾತಿಗೆ...


ಮೃದುವಾದ ಮನಸು
ಹೂವಿನಂತ ಬೆಡಗು
ಕಪಟವಿಲ್ಲದ ಗು
ಕೂಡಿ ಆಗಿರುವೆಯಾ ನೀ ಸುಗುಣ


ನಿಶ್ಕಲ್ಮಶ ಹೃದಯ
ನಡೆನುಡಿ ವಿನಯ
ಯಾರಿಗೂ ಮಾಡದು ಗಾಯ
ಸನಿಹವಿದ್ದೆಡೆ ನೋವು ಮಂಗಮಾಯ


ಸಾಹಿತ್ಯದಲ್ಲಿ ಆಸಕ್ತಿ
ಗುರುಹಿರಿಯರಲ್ಲಿ ಭಕ್ತಿ
ಇನಿಯನಿಗೆ ತುಂಬಿರುವೆ ಶಕ್ತಿ
ಕಂದನಿಗಾಗಿರುವೆ ಸ್ಪೂರ್ತಿ


ಜಾಣೆಯರಲ್ಲಿ ಜಾಣೆ 
ಸುಂದರ ಗುಣ ಸಂಪನ್ನೆ
ಎನಗೊಲಿದ ಮನದನ್ನೆ
ನಿನಗಿದೊ ಜನುಮದಿನದ ಶುಭಾಶಯ......

4 ಕಾಮೆಂಟ್‌ಗಳು:

 1. ಮನದನ್ನೆಯ ಗುಣಗಳನ್ನು ಅವರ ಹೆಸರಿನಲ್ಲೇ ಬಿಡಿಸಿ ಹೇಳಿದ ಪರಿ ಚೆನ್ನಾಗಿದೆ...
  ನಿಮ್ಮ ಗೆಳತಿಗೆ ಜನುಮದಿನದ ಶುಭಾಶಯಗಳು...

  ಪ್ರತ್ಯುತ್ತರಅಳಿಸಿ
 2. ಮನದನ್ನೆ ನೀನೆನಲು ಸಿಟ್ಟೇನೇ...? ಅನ್ನೋ ವಯಸ್ಸಲ್ಲಿ...ನಿಮ್ಮ ಮನದನ್ನೆಯನ್ನು ಈ ರೀತಿ ವರ್ಣಿಸಿ ಹುಟ್ಟುಹಬ್ಬದ ಹಾರೈಕೆ ಕೊಡೋದು...ಮಯೇಸ್ಮಾಮ ನಿಮಗೇ ಸಾಧ್ಯ...ಸುಗುಣಾಗೆ ಶುಭಾಶಯ, ನಿಮಗೂ...ಅದಕ್ಕೇ..

  ಪ್ರತ್ಯುತ್ತರಅಳಿಸಿ
 3. tamma kavanagalalli id sundara.... suguna...
  suguaravarige huttu habbada hardika shubhaashayagalu..taavaagi...

  ಪ್ರತ್ಯುತ್ತರಅಳಿಸಿ