ಸೋಮವಾರ, ಸೆಪ್ಟೆಂಬರ್ 30, 2013

ಕಳ್ ಮಂಜ ಹಾಳ್ಡ್ ವೇರ್


ಕಳ್ ಮಂಜ ಮದುವೆ ಆಗೋಕೆ ಹೆಣ್ಣು ಹುಡುಕ್ತಾ ಇದ್ದ......ಯಲ್ಲರ ಹತ್ತಿರ ಹೇಳಿದ್ದ... ಯಾವುದಾದ್ರು ಹುಡುಗಿ ಇದ್ರೆ ಹೇಳಿ ಅಂತ...ಒಂದು ಸಲ ಯಂಕ್ಟನ ಸೋದರಮಾವ ಭೀಮಪ್ಪ ಊರಿಗೆ ಬಂದಾಗ ಅವರಿಗೂ ಹೇಳಿದ...
ಚುಂಚುನಕುಪ್ಪೆನಾಗೆ ಒಂದು ಒಳ್ಳೆ ಸಂಬಂಧ ಐತೆ ...ಆದ್ರೆ ಹುಡುಗ ಸಾಪ್ಟ್ ವೇರು ಇಲ್ಲ ಹಾಲ್ಡ್ ವೇರು ಬೇಕಾಂತರೆ ಅಂದ್ರು ಭೀಮಪ್ಪ...ನಾನು ಹಾಲ್ಡ್ ವೇರ್ ಪೀಲ್ಡ್ ನಾಗೆ ಇರೋದು ಅಂತೇಳಿ ಅಂದ ಮಂಜ...ಸರಿ ಅಂತ ಹುಡುಗಿ ಮನೆಗೆ ಪೋನ್ ಮಾಡಿ ಹೇಳಿರು ಭೀಮಪ್ಪ....ಅವರು ಸಹ ಕರೆದುಕೊಂಡ್ ಬನ್ನಿ ಅಂದ್ರು....
ಒಂದು ಟಿಟಿ ಗಾಡಿ ಮಾಡ್ಕಂಡು ಹನ್ನೆಳ್ಡು ಜನ ಹೊಳಟ್ರು...ಕಳ್ ಮಂಜ ಸಿದ್ಲಿಂಗು ತವ ಕಂಪ್ಯೂಟ್ರು, ಸಾಪ್ಟ್ ವೇರು, ಹಾಲ್ಡ್ ವೇರು ಯಲ್ಲ ವಸಿ ತಿಳ್ಕಂಡಿದ್ದ...ಕಿಸ್ನ, ಯಂಕ್ಟ ಯಲ್ಲ ಬಡ್ಡಿ ಹೈದ್ನೆ ಯಾವಾಗ್ಲಾ ಕಲಿತೆ ಹಾಳ್ಡ್ ವೇರು ಅನ್ನೋರು.....ಅವರಿಗೂ ಅದೇನು ಅಂತ ಗೊತ್ತಿರಲಿಲ್ಲ...
ಚುಂಚುನಕುಪ್ಪೆಗೆ ಹೋಗ್ತಾ ಇದ್ದಂಗೆ ಜೂಸು ತಿಂಡಿ ಯಲ್ಲ ಕೊಟ್ಟರು....ಯಂಕ್ಟ ಕಿಸ್ನ ಯಲ್ಲ ಸಕ್ಕತಾಗಿ ತಿಂದ್ರು...ಎನ್ಲಾ ಬರೀ ಹೆಣ್ಣು ನೋಡೋಕ್ ಬಂದಾಗಲೇ ಈ ಪಾಟಿ ಐಟಮ್ಸ್ ಮಡಗವರಲ್ಲ ಇನ್ನ ಮದ್ವೆಗೆ ಏನೇನ್ ಮಾಡ್ಸಾರು.....ಗೋಬಿ, ಚಿಪ್ಸ್, ಪಕೋಡ, ಸಮೋಸ, ಸಾವಿಗೆ ಬಾತು, ಮೈಸೂರ್ ಪಾಕು, ಜುಲೇಬಿ, ರಸ್ನ, ಬಾಳೆಹಣ್ಣು ಯಲ್ಲ ಇತ್ತು...ಒಳ್ಳೆ ಕುಳನೇ ತೋರಿಸಿದ್ದೀಯಾ ಕನ್ಲಾ ಅಂದ ಕಿಸ್ನ.....
ಹುಡುಗಿನಾ ನೋಡಿ ಆತು...ಹುಡುಗಿ ಅಪ್ಪ ಮಂಜನ್ನ ಕೇಳಿರು...ಏನ್ ಕೆಲಸ ಅಂತ....ನನದೂ ಹಾಲ್ಡ್ ವೇರ್ ಪೀಲ್ಡು ಅಂದ...
ಸರಿ ಹುಡುಗಿ ಕೇಳುದ್ಲು...ನಿಮ್ಮ ಹತ್ರ ಗ್ರೀನ್ ಕಾರ್ಡ್ ಇದ್ಯಾ.....ಓ ಐತೆ...ಹಸಿರು ಕಾಲ್ಡ್ ಅಲ್ವ....ನಮ್ಮವ್ವನೇ ಮಾಡಿಸವಳೆ ಅಂದ ಮಂಜ....ಹುಡುಗಿಗೂ ಗ್ರೀನ್ ಕಾರ್ಡ್ ಅಂದ್ರೇನು ಅಂತ ಗೊತ್ತಿರಲಿಲ್ಲ. ಸುಮ್ನೆ ಅಮೇರಿಕಾಗೆ ಹೋಗೋಕೆ ಅದು ಬೇಕು ಅಂತ ಅಷ್ಟು ಗೊತ್ತಿತ್ತು....
ಅಷ್ಟಕ್ಕೆ ಸುಮ್ನೆ ಇರದೆ ಹಸ್ರು ಕಾಲ್ಡಿಗೆ ಸಕ್ಕರೆನೇ ಕೊಡಕಿಲ್ಲ ನಮ್ಮೂರಾಗೆ ಅಂದ...ಆಗ ಯಾಕೊ ಡೌಟ್ ಹೊಡಿತು ಅವರಿಗೆ....ಸರಿ ನಾವು ಆಮ್ಯಾಕೆ ಹೇಳ್ತೀವಿ ಅಂತ ಕಳಿಸಿಕೊಟ್ರು....ಆಮ್ಯಾಕೆ ಭೀಮಪ್ಪನ ತವ ಕೇಳಿರು ಮಂಜನ ಕೆಲಸ ಏಲ್ಲಿ ಕೇಳಿ ಅಂತ...ಆಗ ಕೇಳಿದ್ಕೆ ಬಾಯಿಬುಟ್ಟ ಮಂಜ ...
ಟೌನ್ ನಾಗೆ ಕರಿಮುಲ್ಲಾ ಸಾಬಿ ಹಾರ್ಡ್ ವೇರ್ ಅಂಗಡಿನಾಗೆ ನಟ್ಟು ಬೋಲ್ಟು ತೂಕ ಹಾಕೊ ಕೆಲಸ....ಅದುನೂ ಹಾರ್ಡ್ ವೇರ್ ಪೀಲ್ಡು ......
ಥೂ ನಿನ್ ಬಾಯ್ಗೆ ನಟ್ಟು ಬೋಲ್ಟ್ ಇಕ್ಕ.....

5 ಕಾಮೆಂಟ್‌ಗಳು:

 1. ಐನಾತಿ ಮಂಜ ಕಣೇಳಿ! ಹಂಗೇನಾರಾ ಲಗ್ಣ ಆಗ್ಬುಟ್ಟಿದ್ರೇ! ಆಮ್ಯಾಗೆ ಹುಡುಗಿ ಹಿಡ್ಕೋಂಡು ಹಾರ್ಡ್ವೇರಾ ಪ್ರೋಗ್ರಾಮ್ ಮಾಡ್ತೀದ್ಳು ಅವನ ಬುರ್ಡೇ ಸಾಫ್ಟವೇರಾ... :-D

  ಪ್ರತ್ಯುತ್ತರಅಳಿಸಿ
 2. ಇತ್ತಿತ್ತಾಗ್ಯಾಕೋ ಕಳ್ಮಂಜನ್ಕಾಟ..ಬೋ ಆಯ್ತು... ಅಂತ ನಮ್ಮಟ್ಟಿ ಗೊಣ್ಣೆ ಬುಡ್ಡ ..ಸೊರ ಸೊರ ಅಂತ ಎಳ್ಕೊಂಡೇಳಿದ್ದೂ ಏಳಿದ್ದೇ.... ಊಂ ಅಂತೀನಿ,,, ಪಸಂದಾಗೈತೆ ಮಯೇಸ್ಮಾಮ... ಕಳ್ಮಂಜನ್ ಪುರಾಣ..

  ಪ್ರತ್ಯುತ್ತರಅಳಿಸಿ
 3. ನಾನೂ ಹಿಂಗೇಯಾ ಹೇಳ್ಕೊಂಡು ಮದುವೆ ಮಾಡ್ಕೊಳ್ಳಾನ ಅನ್ಕಂಡ್ರೆ ಶಿವಾ, ಹಿಂಗೆಲ್ಲಾ ಕತೆಗಿತೆ ಬರದಾಕಿ ಹೆಣ್ಮಕ್ಕಳೆಲ್ಲಾ ಉಸಾರಾಗವ್ರೆ ಅಂತೀನಿ.

  ಪ್ರತ್ಯುತ್ತರಅಳಿಸಿ
 4. ಹಹ.... ಹಾಲ್ಡು ವೇರ್ ಬಗ್ಗೆ ತಿಳಿದ ಮೇಲೆ ಹುಡುಗಿಯ ಹೃದಯ ಹಾರ್ಡ್ ಆಗಿ ಬಿಡ್ತು. ಸೂಪರ್ ಸರ್ಜಿ.. ಭಾಷೆಯನ್ನೂ ಉಪಯೋಗಿಸುವ ರೀತಿ ಸೂಪರ್

  ಪ್ರತ್ಯುತ್ತರಅಳಿಸಿ