ಮಂಗಳವಾರ, ಆಗಸ್ಟ್ 27, 2013

ಕೃಷ್ಣ ಜನ್ಮಾಷ್ಟಮಿ


ಶ್ರೀ ಕೃಷ್ಣ ಪರಮಾತ್ಮನನ್ನು ಕ್ಷಮೆ ಯಾಚಿಸುತ್ತ )

ನೋಡ್ರಲಾ ಇನ್ನ ಮ್ಯಾಕೆ ನಾವು ಬರೀ ಗಣೇಸನ ಹಬ್ಬ ಮಾತ್ರ ಮಾಡೋದಲ್ಲ.....ಯಲ್ಲಾ ಹಬ್ಬನೂ ಆಚಾರಣೆ ಮಾಡಮ ಅಂದ ಕಳ್ ಮಂಜ.....ಯಲಾರೂ ಆಯ್ತಪ್ಪ ಅಂದ್ರು....ಯಾವುದ್ಲಾ ನೆಕ್ಸಟು ಹಬ್ಬ ಅಂದ ಕ್ಯಾತೆ ರಾಮ....ಗೋಕುಲಸ್ಟಮಿ ಕನ್ಲಾ.... ಇದ್ಯಾವುದಲಾ ಹೊಸ ಹಬ್ಬ ನಾ ಕ್ಯೊಳೆ ಇಲ್ಲ....

ಏ ಇದು ಕಿಸ್ನ ಹುಟ್ಟಿದ ದಿನ ಕಣಲಾ... ಈ ಗಾಂಧಿ ಜಯಂತಿಬಸವ ಜಯಂತಿಅಂಬೇಡ್ಕರ್ ಜಯಂತಿ ಇಲ್ವ ಹಂಗೆ.....ನಮ್ಮ ಕ್ವಾಟ್ಲೆ ಕಿಸ್ನನದಾ....ಏ ಥೂ.. ಅವನಲ್ಲ ಕನ್ಲಾ...ಶ್ರೀ ಕೃಷ್ಣ ಪರಮಾತ್ಮನದು....

ಸರಿ ಬುದ್ವಾರ ಗಣೇಸನ ಗುಡಿ ತವನೇ ಮಾಡಣ ಈ ಕಿತ.....ಡೆಕೊರೇಸನ್ ಯಲ್ಲಾ ಕಳ್ ಮಂಜ ವಹಿಸಿಕೊಂಡ....ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಕ್ಯಾತೆ ರಾಮನ ಕಡೆಯಿಂದ ಅಂತ ಆತು....

ಬುದ್ವಾರ ಬೆಳ್ಳಿಗೆ ಬಂತು... ಗೌಡ್ರು ಸ್ಯಾನೆ ಸಿಟ್ಟು ಮಾಡ್ಕೊಂಡು ಕೈನಾಗೆ ಮಚ್ಚು ತಕ್ಕಂಡು ಎಲ್ಲಿ ಆ ಕಿಸ್ನ ಅಂತ ಕಿರಚಾಡಿಕೊಂಡು ಗುಡಿತಕ್ಕೆ ಬತ್ತ ಇದ್ದ.....ಯಲ್ರಿಗೂ ಆಸ್ಚರ್ಯ....ಸಿವಮ್ಮನ ಹೋಟೆಲ್ ತವ ಕುಂತಿದ್ದ ಜನ ಎಲ್ಲಾ ಇವನಿಗೇನ್ಲಾ ಬತು ದೊಡ್ಡರೋಗ...ಅಲ್ಲಿ ನೋಡಿರೆ ಕಿಸ್ನನ ಹಬ್ಬ ಮಾಡ್ತಾವ್ರೆ...ಇವನು ಕಿಸ್ನನ ಬೈಕೊಂಡು ಓಡ್ತಾವನೆ ಅಂತಿದ್ರು.....ಸಿವಮ್ಮ ಥೂ ಆ ಗೌಡನ ಕೈ ಸೇದೋಗ ಅಂತ ಸಾಪನೂ ಹಾಕಿಲು....

ಗುಡಿ ತವ ಬಂದು ಎಲ್ಲಿ ಆ ಬಡೆತ್ತದು ಅಂತಿದ್ದ ಗೌಡ....ಎಲ್ಲರೂ ಸಮಾಧಾನ ಮಾಡಿರು. "ಏನಾತು ಗೌಡ್ರೆ" ಅಂದ ಬುಲ್ಡೆ ಬಸವ.....ಎನ್ಲಾ ಇದು ಬೋಲ್ಡುನೋಡಲಾ ಅಂದ...ನೋಡಿರೆ ಕಳ್ ಮಂಜ "ಕಿಸ್ನ ಜಯಂತಿ" ಅಂತ ಗುಡಿ ಬಾಗಿಲ ತವ ದೊಡ್ಡದಾಗಿ ಹೂವಿನ ಆರ್ಚ್ ಮಾಡಿ ಹಾಕಿದ್ದ....

ಆಮ್ಯಾಕೆ ಮಾಲಿಂಗ ಬಿಡ್ಸಿ ಹೇಳಿದ....ಇದು ಕೃಷ್ಣ  ಜನ್ಮಾಷ್ಟಮಿ ಗೌಡ್ರೆ ಅಂತ....ಓ ಹಂಗ......ಯಾವನೋ ಬಡ್ಡಿ ಮಗ ಬೆಳ್ಳಿಗೆ ಮನೆ ತವ ಬಂದು... ಗೌಡ್ರೆ ನಿಮ್ಮ ಮಗಳು ಜಯಂತಿಗೂ ಆ ಕಿಸ್ನನಿಗೂ ಮದ್ವೆ ಅಂತೆ...ಬೋಲ್ಡ್ ಹಾಕವ್ರೆ ಗುಡಿ ತವ ಅಂದ....ಅದ್ಕೆ ಓಡೋಡ್ ಬಂದೆ...ಅಂದ ಗೌಡ.

ಆ ಕಳ್ ಮಂಜನೆಯಾ ಹಾಕಿದ್ದು
ನೀವೆ ಹೇಳುದ್ರಿ ಗಾಂಧಿ ಜಯಂತಿಬಸವ ಜಯಂತಿಅಂಬೇಡ್ಕರ್ ಜಯಂತಿ ತರನೇ ಕಿಸ್ನ ಹುಟ್ಟಿದ ದಿನ ಅಂತ ಅದುಕ್ಕೆ ಹಾಕಿದೆ.... ಅಂದ ಕಳ್ ಮಂಜ
ಥೂ ನಿನ್ನ ಮಕ್ಕೆ.......

ಇನ್ನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹೆಂಗಾತು ಅಂತ ನಾಳೆ ಹೇಳ್ತೀನಿ....
ಕೃಷ್ಣ  ಜನ್ಮಾಷ್ಟಮಿಯ ಶುಭಾಶಯಗಳು.


2 ಕಾಮೆಂಟ್‌ಗಳು:

  1. ಹಿಂಗಾರೂ ನಮ್ಮ ಕಿಸ್ನ - ಜಯಂತೀನ ಲಗ್ಣ ಆದ್ರೇ ಹಳೇ ಪ್ರೇಮ್ ಪುರಾಣಾನೂ ಮುಗಿತದೆ ಸಾ..

    ಪ್ರತ್ಯುತ್ತರಅಳಿಸಿ
  2. ಮೊದಲಿಗೆ ಭಾಷ ಪ್ರಯೋಗ.. ಸುಂದರವಾಗಿದೆ.. ಸಂಭಾಷಣೆಗಳು, ಅದಕ್ಕೆ ಇತ್ತ ಗ್ರಾಮ್ಯ ರೂಪ, ಮತ್ತು ಕಥೆಯ ಎಡವಟ್ಟು ಸುಂದರವಾಗಿ ಹೆಣೆದಿದ್ದೀರ.. ಹಾಟ್ಸ್ ಆಫ್

    ಪ್ರತ್ಯುತ್ತರಅಳಿಸಿ